Monday , May 21 2018
Home / News NOW / ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’

ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’

photo (4)ಬೆಂಗಳೂರು: ಅಲ್ಲಿ ಅಸೂಯೆ ಬದಲು ಸ್ನೇಹ ಮನೆ ಮಾಡಿತ್ತು. ಅಹಂ ಬದಲು ವಿನಮ್ರತೆ ಮೇಳೈಸಿತ್ತು. ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು. ಹೀಗೆ ಸಾವಿರಾರು ಮನಸ್ಸುಗಳನ್ನು ಒಂದೆಡೆ ಸೇರಿದ್ದು, ಒಂದಾಗಿಸಿದ್ದು ಸ್ನೇಹದ ಸೂತ್ರವಾಗಿರುವ, ಸಹೋದರತೆಯ ಶ್ರೋತವಾಗಿರುವ ರಾಖಿಹಬ್ಬ.

photo (1) photo (2) photo (3)ಶ್ರಾವಣ ಹುಣ್ಣಿಮೆಯ ಪವಿತ್ರ ದಿನವಾದ ಗುರುವಾರ ಬಸವನಗುಡಿಯ ನ್ಯಾಷನಲ್‍ಕಾಲೇಜು ಮೈದಾನ ಅಭೂತಪೂರ್ವ ಸ್ನೇಹಪರ್ವಕ್ಕೆ, ಅಣ್ಣ-ತಂಗಿಯರ ಸಹೋದರತೆಗೆ ಸಾಕ್ಷಿಯಾಯಿತು. ದಿಗಂಬರ ಸಂತ ಅಂತರ್‍ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ರಾಖಿ ಹಬ್ಬ ವಿಶ್ವದಾಖಲೆ ಸೇರಿತು. ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್ ಅವರ ಮಾರ್ಗದರ್ಶನಲ್ಲಿ ಒಡಹುಟ್ಟಿದ ನೂರಾರು ಅಣ್ಣ- ತಂಗಿಯರು ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತೆಯ ಸಂದೇಶ ಸಾರಿದರು.

ಅಣ್ಣ-ತಂಗಿಯರ ಸಹೋದರತೆ ಸಾರುವ ರಾಖಿಹಬ್ಬದ ಪ್ರಯುಕ್ತತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಈ ವಿಶೇಷ ರಾಖಿ ಹಬ್ಬವನ್ನು ಆಯೋಜಿಸಿತ್ತು. ಈ ಅಭೂತಪೂರ್ವ ಕಾರ್ಯಕ್ರಮವನ್ನು ವಿಶ್ವದಾಖಲೆಗೆ ಸೇರಿಸಲೆಂದೇ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿತ್ತು. ರಕ್ಷಾಬಂಧನದ ಮೊದಲ ಸುತ್ತಿನಲ್ಲಿ 500ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮಒಡಹುಟ್ಟಿದಅಣ್ಣಂದಿರಿಗೆರಾಖಿಕಟ್ಟಿದಾಖಲೆ ಬರೆದರೆ, 2ನೇ ಸುತ್ತಿನಲ್ಲಿ 500ಕ್ಕೂ ಹೆಚ್ಚು ಅಣ್ಣಂದಿರು ತಮ್ಮಒಡಹುಟ್ಟಿದ ಪ್ರೀತಿಯತಂಗಿಯರಿಗೆರಕ್ಷೆಕಟ್ಟಿ ಸಹೋದರತೆಯ ಸಂದೇಶ ಸಾರಿದರು. 3ನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಸಹೋದರಿಯರುತಮ್ಮ ಸಹೋದರಿಯರಿಗೆರಕ್ಷೆಕಟ್ಟಿದರೆ, ಜೈನಬಂಧುಗಳು, ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಪವಿತ್ರ ದಿನಕ್ಕೆ ಸಾಕ್ಷಿಯಾದರು. ಪರಸ್ಪರರಾಖಿ ಧರಿಸಿ ಸ್ನೇಹ ಭಾವದಲ್ಲಿ ತೇಲಿದರು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!