Thursday , December 14 2017
Home / News NOW / ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್‍ಗೂ ದೃಶ್ಯಂ ಸಿನೆಮಾಕ್ಕೂ ಸಂಬಂಧ…?!!! : ಹೋಮಕುಂಡದಲ್ಲಿ ಹೆಣ ಸುಟ್ಟಿದ್ದು ನಿಜನಾ? ಕತೆನಾ?

ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್‍ಗೂ ದೃಶ್ಯಂ ಸಿನೆಮಾಕ್ಕೂ ಸಂಬಂಧ…?!!! : ಹೋಮಕುಂಡದಲ್ಲಿ ಹೆಣ ಸುಟ್ಟಿದ್ದು ನಿಜನಾ? ಕತೆನಾ?

ಉಡುಪಿ : ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ಸಿಐಡಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸಿಐಡಿ ಡಿವೈಎಸ್‍ಪಿ ಎಚ್.ಟಿ.ಚಂದ್ರಶೇಖರ್ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ, ಈ ಕೊಲೆ ಕೇಸ್‍ನ ನಿಗೂಢತೆ ಇನ್ನೂ ಹಾಗೆಯೇ ಮುಂದುವರಿಯುತ್ತಿದೆ… ಅಸಲಿಗೆ ಹೋಮಕುಂಡದಲ್ಲಿ ಹೆಣ ಸುಟ್ಟ ಕತೆ ಬಗ್ಗೆಯೇ ಈಗ ಅನುಮಾನದ ಮಾತುಗಳು ಕೇಳಲಾರಂಭಿಸಿದೆ… ಇದು ಪಕ್ಕಾ ಕತೆ ಎಂಬುದು ಕೆಲವರ ಅನುಮಾನ…! ಹೀಗಾಗಿಯೇ, ಈ ಕೊಲೆಗೂ ದೃಶ್ಯಂ ಸಿನೆಮಾದ ಕತೆಗೂ ಒಂದಷ್ಟು ಸಾಮ್ಯತೆ ಇದೆ ಎಂದು ಹೇಳುವುದು…

drishyaದೃಶ್ಯಂನಲ್ಲಿ ಏನಿದೆ…? : ಈ ಸಿನೆಮಾದಲ್ಲಿ ಕೊಲೆಯ ಪ್ರಕರಣ ಹಾದಿ ತಪ್ಪಿಸಲು ಒಂದು `ಕತೆ’ಯನ್ನು ಸೃಷ್ಟಿ ಮಾಡಲಾಗುತ್ತದೆ. ಈ ಕೊಲೆ ಬಗ್ಗೆ ಮಾಹಿತಿ ಹೊಂದಿದ್ದ ಆ ಕುಟುಂಬ ಯಾರು ಕೇಳಿದರೂ ಒಂದೇ ರೀತಿಯ ಕತೆ ಹೇಳುತ್ತಿತ್ತು ಮತ್ತು ಆ `ಕತೆ’ಗೆ ಪೂರಕವಾದ ಸಾಕ್ಷ್ಯಗಳನ್ನು ಸೃಷ್ಟಿಸಿತ್ತು. ಪೊಲೀಸರು ಕೇಳಿದಾಗಲೂ ಎಲ್ಲರೂ ಒಂದೇ ಕತೆ ಹೇಳುತ್ತಿದ್ದರು. ಒಬೊಬ್ಬರನ್ನು ಪ್ರತ್ಯೇಕವಾಗಿ ಕೇಳಿದಾಗಲೂ ಆ `ಕತೆ’ಯಲ್ಲಿ ಒಂದು ಚೂರೂ ವ್ಯತ್ಯಾಸ ಆಗುತ್ತಿರಲಿಲ್ಲ…!
bhaskar shetty case (7)ಇಲ್ಲೂ ಹಾಗೆಯೇ ಆಗಿದೆಯೇ…? : ಈಗ ಭಾಸ್ಕರ್ ಶೆಟ್ಟಿ ಕೇಸ್‍ನಲ್ಲೂ ಇದೇ `ಸೃಷ್ಟಿ’ಸಿದ ಕತೆ ಇದೆಯಾ…? ಹೀಗೊಂದು ಅನುಮಾನ ಶುರುವಾಗಿದೆ. ಪ್ರಕರಣದ ಆರೋಪಿಗಳಾದ ರಾಜೇಶ್ವರಿ, ನವನೀತ್ ಮತ್ತು ಜ್ಯೋತಿಷಿ ನಿರಂಜನ್ ಭಟ್ ಮೃತದೇಹವನ್ನು ಹೋಮಕುಂಡದಲ್ಲಿ ಸಿಟ್ಟಿರುವುದಾಗಿ ಹೇಳಿದ್ದಾರೆ… ಆದರೆ, ಹೋಮಕುಂಡದಲ್ಲಿ ಸುಟ್ಟ ಕತೆಯೇ ಒಂದು ಸೃಷ್ಟಿನಾ? ತನಿಖೆಯ ಹಾದಿ ತಪ್ಪಿಸುವ ತಂತ್ರನಾ? ಎಂಬುದು ಸದ್ಯದ ಅನುಮಾನ. ಭಾಸ್ಕರ್ ಶೆಟ್ಟಿ ಹತ್ಯೆ ಬಳಿಕ ಹೋಮಕುಂಡದಲ್ಲಿ ಹೆಣ ಸುಟ್ಟ ನಂತರ ಅವಶೇಷಗಳನ್ನು, ಹೋಮಕುಂಡದ ಬೂದಿ, ಟೈಲ್ಸ್‍ಗಳನ್ನು ಬೇರೆ ಬೇರೆ ಚೀಲ ಮಾಡಿ ನದಿಗೆ ಎಸೆಯಲಾಗಿದೆ ಎಂದು ಆರೋಪಿಗಳು ಹೇಳಿದ್ದರು. ಆದರೆ, ಮೊದಲು ಪಳ್ಳಿ ಕಲ್ಕಾರು ನದಿಗೆ ಅವಶೇಷ ಎಸೆಯಲಾಗಿತ್ತು ಎಂದು ಹೇಳಲಾಗಿತ್ತು. ಮೂರ್ನಾಕು ದಿನಗಳ ಹುಡುಕಾಟ ಬಳಿಕ ಎಲುಬು ಸಿಕ್ಕಿತ್ತು.  ಆದರೆ, ಇದು ಮನುಷ್ಯನ ಎಲುಬೇನಾ ಎಂಬುದು ಇನ್ನೂ ದೃಢವಾಗಿಲ್ಲ. ಈ ಬಳಿಕ, ಕಡಂದಲೆಯ ಶಾಂಭವಿ ನದಿಯಲ್ಲಿ ಅವಶೇಷಗಳನ್ನು ಎಸೆಯಲಾಗಿದೆ ಎಂದು ಸುದ್ದಿಯಾಗಿತ್ತು. ಇಲ್ಲೂ ಪೊಲೀಸರು ಹುಡುಕಾಡಿದರು. ಆದರೆ, ಇದುವರೆಗೆ ಯಾವುದೇ ಅವಶೇಷಗಳು ಸಿಕ್ಕಿಲ್ಲ. ಹೀಗಾಗಿಯೇ, ಹೋಮಕುಂಡದಲ್ಲಿ ಹೆಣ ಸುಟ್ಟ ಬಗ್ಗೆ ಅನುಮಾನ ವ್ಯಕ್ತವಾಗಿದ್ದು… ಸ್ವತಃ ಉಡುಪಿ ಬಂಟರ ಸಂಘ ಕೂಡಾ ಈ ಅನುಮಾನ ವ್ಯಕ್ತಪಡಿಸಿದೆ. ಭಾಸ್ಕರ್ ಶೆಟ್ಟಿ ಮೃತದೇಹ ಸುಟ್ಟಿದ್ದಾರೆ ಎನ್ನಲಾದ ಜ್ಯೋತಿಷಿ ನಿರಂಜನ್ ಭಟ್ ಮನೆಯ ಹೋಮಕುಂಡ ಪರಿಶೀಲಿಸಿದ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಪರಿಶೀಲನೆಗೆ ತೆರಳಿದ ತಂಡಕ್ಕೆ ಇಲ್ಲಿ ಭಾಸ್ಕರ್ ಶೆಟ್ಟಿ ಮೃತದೇಹ ಸುಟ್ಟಿರುವ ಯಾವೊಂದು ಕುರುಹುಗಳೂ ಸಿಕ್ಕಿಲ್ಲ… ಇನ್ನೊಂದು ಕಡೆ, ಹೋಮಕುಂಡದಲ್ಲಿ ಸ್ವಲ್ಪ ಸುಟ್ಟ ಬಳಿಕ ಹೆಣವನ್ನು ಬೇರೆ ಯಾವುದಾದರೂ ಕಡೆಯಲ್ಲಿ ಶವ ವಿಲೇವಾರಿ ಮಾಡಲಾಗಿದೆಯಾ ಎಂಬ ಸಂಶಯ ಕೂಡಾ ಇದೆ… ಆದರೆ, ಆರೋಪಿಗಳು ಮಾತ್ರ ಎಲ್ಲರೂ ಒಂದೇ ಕತೆ ಹೇಳುತ್ತಿದ್ದಾರೆ… ಹೀಗಾಗಿಯೇ, ಹೋಮಕುಂಡದ ವಿಚಾರ `ದೃಶ್ಯಂ’ ಸಿನೆಮಾದ ಪ್ರೇರಿತನಾ ಎನ್ನುವುದು ಅನುಮಾನ… ಭಾಸ್ಕರ ಶೆಟ್ಟಿಯ ಮೃತ ದೇಹವನ್ನು ಬೇರೆ ಎಲ್ಲೋ ಬಿಸಾಡಿ ಅಥವಾ ವಿಲೇವಾರಿ ಮಾಡಿ ಈ ಹೋಮಕುಂಡದ ಕತೆ ಸೃಷ್ಟಿಸಲಾಗಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

bhaskar shetty case (8)ದುರ್ವಾಸನೆಗೂ ಬಂದಿಲ್ಲ…! : ಇನ್ನು, ಹೋಮಕುಂಡದಲ್ಲಿ ಹೆಣ ಸುಟ್ಟಿದ್ದರೆ ವಿಚಿತ್ರ ದುರ್ವಾಸನೆ ಬರುತ್ತಿತ್ತು. ಆದರೆ, ರಾತ್ರಿ ಹೆಣ ಸುಟ್ಟಿದ್ದಾರೆ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಆದರೂ, ಇಲ್ಲಿ ಹೆಣ ಸುಟ್ಟ ವಾಸನೆ ಪಕ್ಕದ ಮನೆಯವರಿಗೆ ಬಂದೇ ಇಲ್ಲ..! ಇದು ಕೂಡಾ ಅನುಮಾನ ಮೂಡಿಸುತ್ತದೆ ಎಂದು ಪರಿಶೀಲನೆಗೆ ತೆರಳಿದ ಬಂಟರ ಸಂಘದ ಸದಸ್ಯರು ಹೇಳಿದ್ದಾರೆ.

ಮೇಸ್ತ್ರಿಗೂ ಸಿಕ್ಕಿಲ್ಲ ಕುರುಹು…! : ಜ್ಯೋತಿಷಿ ನಿರಂಜನ ಭಟ್ಟನ ಮನೆಯ ಹೋಮ ಕುಂಡವನ್ನು ಜುಲೈ 29 ರಂದು ರಾತ್ರಿ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ ಸ್ಥಳೀಯ ಕಿಟ್ಟಿ ಮೇಸ್ತ್ರಿ ಎಂಬುವವರಿಂದ ದುರಸ್ತಿ ಮಾಡಿಸಿದ್ದರು. ಆದರೆ, ದುರಸ್ತಿ ವೇಳೆ, ಕಿಟ್ಟಿ ಮೇಸ್ತ್ರಿಗೆ ಹೆಣ ಸುಟ್ಟ ಯಾವುದೇ ಕುರುಹುಗಳು ಸಿಕ್ಕಿಲ್ಲವಂತೆ.

ಸಿಐಡಿ ಮುಂದಿದೆ ಬೆಟ್ಟದಷ್ಟು ಸವಾಲು : ಸಿಐಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ಆದರೆ, ಮೃತದೇಹದ ಅವಶೇಷಗಳು ಇನ್ನೂ ಸಿಕ್ಕಿಲ್ಲ. ಹೀಗಾಗಿ, ತನಿಖೆ ಹೇಗೆ ಸಾಗುತ್ತದೆ ಎಂಬುದೇ ದೊಡ್ಡ ಪ್ರಶ್ನೆ. ಈಗಾಗಲೇ ಸಿಐಡಿ ತಂಡ ಭಾಸ್ಕರ್ ಶೆಟ್ಟಿ ಮನೆಗೆ ಹೋಗಿ ಪರಿಶೀಲನೆ ನಡೆಸಿದೆ.

ರಕ್ತ ಮಾದರಿ ಸಂಗ್ರಹ : ಇನ್ನು, ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಮತ್ತು ಸಹೋದರರ ರಕ್ತದ ಮಾದರಿಯನ್ನು ತನಿಖಾ ತಂಡ ಸಂಗ್ರಹಿಸಿದೆ. ಕೋರ್ಟ್‍ನ ಅನುಮತಿ ಪಡೆದು ಡಿಎನ್‍ಎ ಪರೀಕ್ಷೆ ಮಾಡಲು ತನಿಖಾ ತಂಡ ನಿರ್ಧಾರ ಮಾಡಿದೆ.

About sudina

Check Also

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್​ ಬೇಗ್​ ಕೀಳುಮಟ್ಟದ ಪದ ಪ್ರಯೋಗ : ಬಿಜೆಪಿ ಆಕ್ರೋಶ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಚಿವ ರೋಷನ್ ಬೇಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. …

Leave a Reply

Your email address will not be published. Required fields are marked *

error: Content is protected !!