Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood / ಪವನ್ ಕಲ್ಯಾಣ್ ಭೇಟಿಯಾದ ಕುಮಾರಸ್ವಾಮಿ

ಪವನ್ ಕಲ್ಯಾಣ್ ಭೇಟಿಯಾದ ಕುಮಾರಸ್ವಾಮಿ

ಹೈದರಾಬಾದ್ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆಲುಗು ಪವರ್‍ಸ್ಟಾರ್ ಪವನ್ ಕಲ್ಯಾಣ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತಮ್ಮ ಪುತ್ರ ನಿಖಿಲ್ ಅಭಿನಯದ `ಜಾಗ್ವಾರ್’ ಚಿತ್ರದ ಆಡಿಯೋ ರಿಲೀಸ್‍ಗೆ ಆಗಮಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾಗಿ ಗೊತ್ತಾಗಿದೆ. ಅಲ್ಲದೆ, ಪವನ್ ಕಲ್ಯಾಣ್ ಜಾಗ್ವಾರ್ ಚಿತ್ರದ ಟೀಸರನ್ನು ವೀಕ್ಷಿಸಿದ್ದಾರೆ. ನಿಖಿಲ್ ಅಭಿನಯದ ಜಾಗ್ವಾರ್ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 400 ರಿಂದ 450, ಕರ್ನಾಟಕದಲ್ಲಿ 325 ಸ್ಕ್ರೀನ್ ಮತ್ತು ವಿದೇಶದಲ್ಲಿ 100 ಸ್ಕ್ರೀನ್‍ನಲ್ಲಿ ಚಿತ್ರ ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
Video courtesy : TFPC

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!