Friday , April 20 2018
Home / Film News / Coastalwood / ಕೊಂಕಣಿ ಭಾಷೆ ಸಿನೆಮಾದಲ್ಲೊಂದು ಬೆಳ್ಳಿ ಕಿರಣ : ಜನಮನ್ನಣೆಗೆ ಪಾತ್ರವಾಗುತ್ತಿದೆ `ನಶೀಬಾಚೋ ಖೆಳ್’

ಕೊಂಕಣಿ ಭಾಷೆ ಸಿನೆಮಾದಲ್ಲೊಂದು ಬೆಳ್ಳಿ ಕಿರಣ : ಜನಮನ್ನಣೆಗೆ ಪಾತ್ರವಾಗುತ್ತಿದೆ `ನಶೀಬಾಚೋ ಖೆಳ್’

ಮಂಗಳೂರು : ಕೊಂಕಣಿ ಸಿನೆಮಾ ರಂಗದಲ್ಲಿ ದಾಖಲೆ ಎಂಬಂತೆ ಚಿತ್ರವೊಂದು ಭರ್ಜರಿ ಜನಮನ್ನಣೆಗೆ ಪಾತ್ರವಾಗಿದೆ. `ನಶೀಬಾಚೋ ಖೆಳ್’ ಕೊಂಕಣಿ ಚಿತ್ರರಂಗದ ಭರವಸೆಯ ಬೆಳ್ಳಿರೇಖೆ ಮೂಡಿಸಿದೆ. ಸಿನೆಮಾ ಪರಿಭಾಷೆಯ ಎಲ್ಲಾ ಆಯಾಮಗಳನ್ನು ಹೊಂದಿರುವ ಈ ಚಿತ್ರ ಜನರನ್ನು ಬಹುವಾಗಿ ಸೆಳೆಯುತ್ತಿದೆ. ರಜಾ ದಿನಗಳಲ್ಲಂತೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.

Noshibacho Khell 1 (1) Noshibacho Khell 1 (2) Noshibacho Khell 1ಹೆನ್ರಿ ಡಿಸೋಜಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಇವರು ಖುಷಿಯಾಗಿದ್ದಾರೆ. ಬೇರೆ ಬೇರೆ ಕಡೆಗಳಿಂದ ಜನ ಕರೆ ಮಾಡಿ ಬಲ್ಕ್‍ನಲ್ಲಿ ಟಿಕೆಟ್‍ಗಳನ್ನು ಕೊಳ್ಳುತ್ತಿದ್ದಾರಂತೆ… ಭೋಜ್‍ಪುರ್ ಮರಾಠಿ ಖ್ಯಾತಿಯ ಹೇರಿ ಫರ್ನಾಂಡೀಸ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ 12ರಂದು ಈ ಚಿತ್ರ ಬಿಡುಗಡೆಯಾಗಿದೆ. ಸರಿಸುಮಾರು 8 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾದ ಕೊಂಕಣಿ ಚಿತ್ರ ಇದಾಗಿದೆ.


About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!