Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ಎಸ್‍ವಿಎಸ್‍ನಲ್ಲಿ `ಹೊಂಬೆಳಕು ಭಿತ್ತಿ ಪತ್ರಿಕೆ’ ಬಿಡುಗಡೆ

ಬಂಟ್ವಾಳ : ಎಸ್‍ವಿಎಸ್‍ನಲ್ಲಿ `ಹೊಂಬೆಳಕು ಭಿತ್ತಿ ಪತ್ರಿಕೆ’ ಬಿಡುಗಡೆ

ಬಂಟ್ವಾಳ: ಕಲೆ, ಸಾಹಿತ್ಯದ ಅಭಿರುಚಿಯು ಮಾನವನ ಬದುಕನ್ನು ವಿಕಾಸಗೊಳಿಸಲು ಪೂರಕವಾಗಿದೆ. ಸುಖ, ನೆಮ್ಮದಿಯ ಬಾಳ್ವೆಗೆ ಸಾಹಿತ್ಯದ ಒಡನಾಟವು ಅತೀ ಅವಶ್ಯಕವಾದುದು. ಸಾಹಿತ್ಯದ ಚಿಕಿತ್ಸಕ ಗುಣವು ಸಮಾಜದಲ್ಲಿ ಮಾನವೀಯ ಸಂಬಂಧ ಹಾಗೂ ಸಹಬಾಳ್ವೆ ನೆಲೆಸುವುದಕ್ಕೆ ಪೋಷಕಶಕ್ತಿಯಾಗಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಮೋಹನರಾವ್ ತಿಳಿಸಿದ್ದಾರೆ.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘ ಆಯೋಜಿಸಿದ್ದ `ಹೊಂಬೆಳಕು ಭಿತ್ತಿ ಪತ್ರಿಕೆ’ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಾಲೆ, ಕಾಲೇಜುಗಳಲ್ಲಿರುವ ಭಿತ್ತಿ ಪತ್ರಿಕೆಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸುವ ಮುಖೇನ ಒಳ್ಳೆಯ ಸಂಸ್ಕಾರವನ್ನು ಜಾಗೃತಗೊಳಿಸುತ್ತದೆ ಎಂದರು.

ಪುರಾಣ, ಇತಿಹಾಸದ ಅನೇಕ ರೋಚಕ ಕತೆಗಳು, ಐತಿಹಾಸಿಕ ಸಂಗತಿಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯವನ್ನು ಬೆಳೆಸುವುದಕ್ಕೆ ಸಹಾಯಕವಾಗುತ್ತದೆ ಎಂದ ಅವರು, ಆಧುನಿಕ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಹೊಂಬೆಳಕು ಭಿತ್ತಿ ಪತ್ರಿಕೆಯು ವೇದಿಕೆಯಾಗಿದೆ. ವಿದ್ಯಾರ್ಥಿಗಳೇ ಬರೆದ ಕತೆ, ಕವಿತೆ, ಲೇಖನ ಮೊದಲಾದ ಬರವಣಿಗೆಗಳು ತಮ್ಮದೇ ಅಂದವಾದ ಕೈ ಬರಹದಲ್ಲಿ ಇಲ್ಲಿ ಮೂಡಿ ಬರುತ್ತವೆ. ಕಲಿಕೆಯ ಜೊತೆಗಿನ ವೈವಿಧ್ಯಪೂರ್ಣವಾದ ಹವ್ಯಾಸವು ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುತ್ತದೆ ಎಂದರು.

`ಹೊಂಬೆಳಕು ಭಿತ್ತಿ ಪತ್ರಿಕೆ’ ಸಂಯೋಜಕ, ಉಪನ್ಯಾಸಕ ಚೇತನ್ ಮುಂಡಾಜೆ ಪ್ರಾಸ್ತಾವಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಪೃಥ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಿತ್ತಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ ಅಕ್ಷತ ಪ್ರಾರ್ಥಿಸಿದರು. ಮೇಘನ ಪೈ ಜೆ. ವಂದಿಸಿದರು. ವಿದ್ಯಾರ್ಥಿನಿ ಅನನ್ಯ ಜಿ. ಕಾರ್ಯಕ್ರಮ ನಿರೂಪಿಸಿದರು.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!