Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ವಗ್ಗ : ಕಾಡಬೆಟ್ಟುವಿನ ಕಣ್ಮನ ಸೆಳೆದ ಬಾಲಕೃಷ್ಣರು…

ವಗ್ಗ : ಕಾಡಬೆಟ್ಟುವಿನ ಕಣ್ಮನ ಸೆಳೆದ ಬಾಲಕೃಷ್ಣರು…

ಬಂಟ್ವಾಳ: ಇಲ್ಲಿನ ವಗ್ಗ ಕಾಡಬೆಟ್ಟು ಬಾಲಗೋಕುಲ ಸಮಿತಿ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಬುಧವಾರ ವಗ್ಗದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪ್ರಗತಿಪರ ಕೃಷಿಕ ಶಾಂತನ್ ಪಿಳ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಾಲಕೋಕುಲ ಸಮಿತಿ ಅಧ್ಯಕ್ಷೆ ಸುಮಿತ್ರ ದಿನೇಶ್ ಅಧ್ಯಕ್ಷತೆ ವಹಿಸಿದರು. ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೌರವ ಸಲಹೆಗಾರರಾದ ಸುಗುಣ ಶಾಂತರಾಮ ಪ್ರಭು ಶ್ರೀ ಕೃಷ್ಣನ ಕಥಾ ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಬಾಲಗೋಕುಲ ಸಮಿತಿಯ ಉಪಾಧ್ಯಕ್ಷರಾದ ಯಶೋಧ ಜೆ.ಬಂಗೇರಾ, ಹರಿಶ್ಚಂದ್ರ ಪ್ರಭು, ಕಾರ್ಯದರ್ಶಿ ಹರೀಶ್ ಜಾರಬೆಟ್ಟು, ಗೌರವ ಸಲಹೆಗಾರ ಲಕ್ಷ್ಮಣ್ ಭಟ್,  ಸದಸ್ಯರಾದ ಸುರೇಶ್ ಉರುಡಾಯಿ, ಸುನೀತಾ ಆರ್ ನಾಯಕ್, ಶಿವಪ್ಪ ಹಂಚಿಕಟ್ಟೆ, ಜಯಂತಿ ವಿಠಲ್ ಕುಲಾಲ್, ವಿಶ್ವನಾಥ ಪೂಜಾರಿ, ಅರುಣ್ ರವೀಶ್ ಆಚಾರ್, ಹರಿಣಾಕ್ಷಿ, ಚಂಚಲಾಕ್ಷಿ ಉಪಸ್ಥಿತರಿದ್ದರು. ಮಾನಸ ಸ್ವಾಗತಿಸಿ, ಸಮಿತಿಯ ಸಂಚಾಲಕ ಗಿರೀಶ್ ಶಿರ್ಲಾಲು ಪ್ರಸ್ತಾವನೆಗೈದರು, ಸುದೀಕ್ಷ ವಂದಿಸಿ, ಕೀರ್ತೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!