Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ಸಂಗಬೆಟ್ಟು : ಪೋಡಿ ಮುಕ್ತ ಗ್ರಾಮಕ್ಕೆ ಚಾಲನೆ

ಸಂಗಬೆಟ್ಟು : ಪೋಡಿ ಮುಕ್ತ ಗ್ರಾಮಕ್ಕೆ ಚಾಲನೆ

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡುವುದರ ಮೂಲಕ ಪಟ್ಟಾ ಜಮೀನುದಾರರ ಪೈಕಿ ಸರ್ವೆ ನಂಬರ್ ತೆಗೆದು ಹಾಕಿ ಪ್ರತ್ಯೇಕ ನಕ್ಷೆ ಮತ್ತು ಪಹಣಿ ಪತ್ರಿಕೆ ವಿತರಿಸಲಾಗುವುದು ಎಂದು ಭೂ ದಾಖಲೆಗಳ ಸಹಾಯಕ ನಿರ್ದೆಶಕ ಮಂಜುನಾಥ ಅವರು ತಿಳಿಸಿದ್ದಾರೆ.

ಸಂಗಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ಪೋಡಿಮುಕ್ತ ಸಂಗಬೆಟ್ಟು ಗ್ರಾಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಪೋಡಿ ಮುಕ್ತ ಗ್ರಾಮ ಯೋಜನೆ ಯಶಸ್ವಿಯಾಗಲು ಇಲಾಖೆಯೊಂದಿಗೆ ಸಮುದಾಯ ಕೈಜೋಡಿಸಿದಾಗ ಮಾತ್ರ ಸಾಧ್ಯ ಎಂದರು. ಸಭೆಯಲ್ಲಿ ಭೂಮಾಪನ ನಿರೀಕ್ಷಕ ಲಿಂಗೇಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫರ್ನಾಂಡೀಸ್, ಸರ್ವೇ ಸೂಪರ್ ವೈಸರ್ ನಿಸಾರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸಂಗಬೆಟ್ಟು ಗ್ರಾಮ ಕರಣಿಕ ಜನಾರ್ದನ ವಂದಿಸಿದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!