Monday , August 20 2018
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್ ಶೆಟ್ಟಿ ಪ್ರಕರಣ : ನಿರಂಜನ್ ಭಟ್ ಆತ್ಮಹತ್ಯೆ ಪ್ರಯತ್ನನೂ ನಾಟಕನಾ…?!!!!!

ಭಾಸ್ಕರ್ ಶೆಟ್ಟಿ ಪ್ರಕರಣ : ನಿರಂಜನ್ ಭಟ್ ಆತ್ಮಹತ್ಯೆ ಪ್ರಯತ್ನನೂ ನಾಟಕನಾ…?!!!!!

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ಬಗೆದಷ್ಟು ಹೊರಬರುತ್ತಿದೆ. ಪಕ್ಕಾ ಪ್ಲಾನ್ ಮಾಡಿಕೊಂಡೇ ಆರೋಪಿಗಳು ಭಾಸ್ಕರ್ ಶೆಟ್ಟಿ ಕತೆಯನ್ನು ಮುಗಿಸಿದ್ದಾರೆ. ಅದೆಷ್ಟೋ ಜಾಣತನದಿಂದ ಭಾಸ್ಕರ್ ಶೆಟ್ಟಿ ಹತ್ಯೆ ಮಾಡಲಾಗಿದೆ ಎಂದರೆ ಶವದ ಅವಶೇಷಗಳೂ ಇನ್ನೂ ಸಿಕ್ಕಿಲ್ಲ…! ಯಾವುದೇ ಪತ್ತೆಧಾರಿ ಕತೆಗಿಂತ ಕಮ್ಮಿ ಇಲ್ಲ ಈ ಹತ್ಯಾ ಪ್ರಕರಣ… ಈ ನಡುವೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‍ನ `ಬ್ರಹನ್ನಾಟಕ’ ಬಯಲಾಗಿದೆ…

ಜ್ಯೋತಿಷಿ ನಿರಂಜನ್ ಭಟ್ ಬಂಧನ ಆದ ತಕ್ಷಣ ಕೈಯಲ್ಲಿದ್ದ ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ… ಆದರೆ, ಈ ಆತ್ಮಹತ್ಯೆ ಯತ್ನವೇ ದೊಡ್ಡ ನಾಟಕವಂತೆ…! ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ನಿರಂಜನ್ ಭಟ್ ವಜ್ರ ನುಂಗಿದ್ದ ನಾಟಕವಾಡಿದ್ದ…! ಆದರೆ, ಸಿಐಡಿ ತನಿಖೆಯಲ್ಲಿ ಈತನ ಈ ಬೃಹನ್ನಾಟಕ ಬಯಲಾಗಿದೆ… ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ದಿಕ್ಕು ತಪ್ಪಿಸುವುದು ಮತ್ತು ಇನ್ನಷ್ಟು ದುರ್ಬಲವಾಡುವ ಪ್ರಯತ್ನದ ಒಂದು ಪ್ರಯತ್ನವಾಗಿಯೇ ನಿರಂಜನ್ ಈ ನಾಟಕ ಮಾಡಿದ್ದ…!

ನಾಪತ್ತೆಯಾಗಿದ್ದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಮಗ ನವನೀತ್ ಮತ್ತು ಜ್ಯೋತಿಷಿ ನಿರಂಜನ್ ಭಟ್‍ರಿಂದ ಹತ್ಯೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಈ ಮೂವರನ್ನು ಬಂಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ನಿರಂಜನ ವಜ್ರ ನುಂಗಿದ್ದ…! ತಕ್ಷಣ ಈತನನ್ನು ಪೊಲೀಸರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ದಾಖಲೆ ನಾಶ ಮಾಡಲು ಬಳಕೆ…!? : ಇಷ್ಟಕ್ಕೂ ಈ `ಆತ್ಮಹತ್ಯಾ’ ನಾಟಕದ ಉಪಾಯ ಹೇಳಿದ್ದೇ ಪೊಲೀಸರಂತೆ… ಪ್ರಕರಣದ ಬಗ್ಗೆ ಉಳಿದಿರುವ ಕೆಲ ಸಾಕ್ಷ್ಯಿಗಳನ್ನು ನಾಶ ಮಾಡುವ ಸಲುವಾಗಿಯೇ ಈ ನಾಟಕ ಮಾಡಲಾಗಿದೆಯಂತೆ… ಹೀಗಂತ ಸಿಐಡಿ ಮೂಲಗಳು ತಿಳಿಸಿವೆ. ಹೀಗಾಗಿ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ದುಡ್ಡಿನ ಬಲದೊಂದಿಗೆ ಕೆಲ ಪೊಲೀಸರೂ ಕೈ ಜೋಡಿಸಿದ್ದು ಇಲ್ಲಿ ಸ್ಪಷ್ಟ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವ ಮೊದಲು ಇದ್ದ ಸಾಕ್ಷ್ಯಗಳನ್ನೂ ನಾಶ ಮಾಡುವುದು ಈ ಉಂಗುರ ನುಂಗಿದ ಕತೆಯ ಉದ್ದೇಶವಾಗಿತ್ತು ಎಂಬ ವಿಷಯ ಈಗ ಹರಿದಾಡುತ್ತಿದೆ. ಅದೂ ಅಲ್ಲದೆ, ನಿರಂಜನ ಭಟ್ ವೈದ್ಯಕೀಯ ಪರೀಕ್ಷೆ ವರದಿ ನೋಡಿದಾಗಲೂ ಈ ಅಂಶ ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂಬ ಮಾಹಿತಿ ಸಿಐಡಿ ಮೂಲಗಳಿಂದ ಲಭ್ಯವಾಗಿದೆ…

ಪುಡಿ ಮಾಡಿದ ವಜ್ರವಷ್ಟೇ ಅಪಾಯ…! : ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಇದೆ… ಈ ಅಂಶ ನಿರಂಜನ್ ನಾಟಕಕ್ಕೆ ಇನ್ನಷ್ಟು ಪುಷ್ಟಿ ಕೊಡುತ್ತದೆ. ಅದೇನೆಂದರೆ, ವಜ್ರದ ಹರಳನ್ನು ನುಂಗಿದರೆ ಏನೂ ಅಪಾಯವಾಗುವುದಿಲ್ಲ. ಇದರಿಂದ ಜೀವಕ್ಕೇನು ತೊಂದರೆ ಇಲ್ಲ. ಆದರೆ, ವಜ್ರವನ್ನು ಪುಡಿ ಮಾಡಿ ತಿಂದರೆ ಅಷ್ಟೇ ಅದು ಜೀವಕ್ಕೆ ಅಪಾಯ ತರುತ್ತದೆ. ಪುಡಿ ಮಾಡಿದ ವಜ್ರ ದೇಹದ ಒಳಗಿನ ಅಂಗಾಂಗಗಳಿಗೆ ತೊಂದರೆ ಮಾಡುತ್ತದೆ. ಆದರೆ, ಇಡೀಯಾಗಿ ನುಂಗಿದ ವಜ್ರದಿಂದ ಏನೂ ತೊಂದರೆ ಇಲ್ಲ. ಸ್ವತಃ ಸಿಐಡಿ ಪೊಲೀಸರು ಕೂಡಾ ಈ ನಿಟ್ಟಿನಲ್ಲೇ ತನಿಖೆ ನಡೆಸಿದ್ದು, ಇದರಿಂದ ನಿರಂಜನನ ನಾಟಕ ಬಯಲಾಗಿದೆ. ಸಿಐಡಿ ಅಧಿಕಾರಿಗಳ ಅಭಿಪ್ರಾಯವೂ ಇದೇ ಆಗಿದೆ…

ಒಟ್ಟಾರೆ, ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ… ಬರೀ ಇಷ್ಟೇ ಅನೇಕರು ಸೇರಿಯೇ ಭಾಸ್ಕರ್ ಶೆಟ್ಟಿ ಹತ್ಯೆ ಆಗಿರುವುದು ಸ್ಪಷ್ಟ…

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!