Monday , December 10 2018
ಕೇಳ್ರಪ್ಪೋ ಕೇಳಿ
Home / Sudina Special / ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡ ರವಿ ಬೆಳಗೆರೆ

ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡ ರವಿ ಬೆಳಗೆರೆ

ಬೆಂಗಳೂರು : ಹಿರಿಯ ಪತ್ರಕರ್ತ ರವಿ ಬೆಳಗೆರೆ ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡಿದ್ದಾರೆ… ಇಲ್ಲಿದೆ ನೋಡಿ ರವಿ ಬರವಣಿಗೆಯ ಪೂರ್ಣ ಪಾಠ..

ನನ್ನ ವ್ಯಕ್ತಿಗತ ಜೀವನ ಚಂದ ಮತ್ತು ಸ್ಟುಪಿಡ್. ಹೈವ್ ಪೀಡಿತೆ ವೀಣಾಧರಿಗೆ ಆಶ್ರಯಕೊಟ್ಟೆ . ಭೀಮ ತೀರದ ಹಂತಕರಿಗೆ ಬದುಕಿನ ದಾರಿ ತೋರಿಸಿದೆ. ಒಂದು ಆಸ್ಪತ್ರೆ ಕಟ್ಟಿಸೋ ಆಸೆ ಇದೆ. ನನ್ನ ಪ್ರಾರ್ಥನಾ ಸ್ಕೂಲ್ನಲ್ಲಿ ಜಾತಿ ಇಲ್ಲ. ಅದು ಅಡ್ಮಿಷನ್ ಫಾರ್ಮ್ನಲ್ಲೇ ಇಲ್ಲ. ಎಂಟು ಸಾವಿರ ಮಕ್ಕಳಿದ್ದಾರೆ. ಅವರಿಂದ ಡೊನೇಷನ್ ಪಡೆದಿಲ್ಲ. ಯಾರಿಂದಲೂ ಪಡೆಯಲ್ಲ. ನಾನು ಕುಡಿತ ಬಿಟ್ಟು ಮೂರು ವರ್ಷ ಆಗಲಿದೆ. ಭಾರ್ತಿ ಸಿಗರೆಟ್ ಸೇದುತ್ತೇನೆ. ಈಗೊಬ್ಬಳು ಮಗಳು ಸಿಕ್ಕಿದ್ದಾಳೆ: ಸುನೀತಾ ಅಂತ. ಈ ಗಿಡ್ಡ ಹುಡುಗಿ ರಾತ್ರಿಯಿಡೀ ನನ್ನನ್ನು ಕಾಯುತ್ತಾಳೆ. ಕಾಫಿ, ಟೀ ಕೊಡ್ತಾಳೆ. ಸೋಮಾರಿ ಅಲ್ಲ. ಗಿಡ್ಡಿಗೆ ಮಾಡುವೆ ಮಾಡಬೇಕು. ಅಪ್ಪಾಜಿ ಅಂತ ಬಾಯ್ತುಂಬ ಕರೀತಾಳೆ. ಜಾತಿ ಬಹುಶ ಹಾಲು ಮತಡ ಕುರುಬರು. ಹುಡುಗ ಇದ್ದಾರೆ ನೋಡಿ. ನಾನೇ ಮಾಡಿಕೊಡತೀನಿ. ವರದಕ್ಷಿಣೆ ಕೊಡಲ್ಲ. ವಿಪರೀತ ಕುಡುಕ, ಬ್ಲಾಕ್ಮೇಲ್ ಮಾಡ್ತಾನೆ, ಹೆಂಗಸರ ಚಟ ಇದೆ….ಇತ್ಯಾದಿ ಆರೋಪಗಳು ನನ್ನ ಮೇಲೆ ಇವೆ. ಇಪ್ಪತ್ತು ವರ್ಷದಲ್ಲಿ ಪತ್ರಿಕೆ, ನಿಯರ್ಲಿ ಎಂಬತ್ತು ಪುಸ್ತಕ, ತನಿಖೆ, ತಿರುಗಾಟ….ಎಲ್ಲವುಗಳ ಮಧ್ಯೆ ಅವೆಲ್ಲವನ್ನೂ ಯಾವಾಗ ಮಾಡಲಿ? ಪತ್ನಿ ಲಲಿತಾಳನ್ನು ನೋಡಿ ದಿನಗಳೇ ಆಗಿವೆ. ಎರಡನೇ ಸಂಬಂಧ ಹದಿನೆಂಟು ವರ್ಷದಿಂದ ಇತ್ತು. ಅದೀಗ ಕಳಚಿಕೊಂಡಿದೆ. ಎಂಟು ವರ್ಷದ ಮುದ್ದು ಮಗ ನನ್ನ ಟೆರಿಬಲ್ ಬಲಹೀನತೆ. ಸರಿ ಸುಮಾರು 50 ಲಕ್ಷ ಟ್ಯಾಕ್ಸ್ ಕಟ್ಟುತ್ತೇನೆ. ಬ್ಲಾಕ್ ಮನಿ ಇಲ್ಲ. ಸುಮಾರು ಎರಡು ವರ್ಷದಿಂದ ಹೆಣ್ಣಿನ ಸ್ಪರ್ಶ ಇಲ್ಲ. ಆಫೀಸ್ನಲ್ಲಿ ಒಂಟಿ ಜೀವನ. ಇಲ್ಲೇ ಅಡುಗೆ ಮಾಡ್ತಾರೆ. ಲಲಿತೆ ಕೂಡ ಕಳಿಸ್ತಾಳೆ. ಹಿಮ ಮತ್ತು ಅವನ ತಾಯಿಗೆ ರೆಗ್ಯುಲರ್ ಆಗಿ ಹಣ ಕಲಿಸುತ್ತೇನೆ. ಪೂರ್ತಿ ವಿದ್ಯಾಭ್ಯಾಸದ ಹೊಣೆ ನನ್ನದು. ನನ್ನನ್ನು ತಂದೆಯಂತೆ ನೋಡುವ ಹೆಣ್ಣು ಮಕ್ಕಳಿದ್ದಾರೆ. ನನಗೆ ಮೂರು ಜನ ಮೊಮ್ಮಕ್ಕಳಿದ್ದಾರೆ. ಅವರಲ್ಲಿ ಇಬ್ಬರು ಶುದ್ಧ ರಾಕ್ಷಸಿಯರು. ಮೊಮ್ಮಗ ನನ್ನಂತೆಯೇ ಸಭ್ಯ. ಇಬ್ಬರು ಅಳಿಯಂದಿರೂ ಸಭ್ಯರು. ಶ್ರೀನಗರ ಕಿಟ್ಟಿ, ಭಾವನಾ ಬೆಳಗೆರೆ, ಅವರ ಮಗಳು ಪರಿಣಿತ ಈಗ ನಟಿಸುತ್ತಿದ್ದಾರೆ.
ನನ್ನ ಬಗ್ಗೆ ಕೊಂಚ ಇಂಟೆರೆಸ್ಟಿಂಗ್ ಸಂಗತಿ ಅಂದರೆ ನನ್ನ ಬರವಣಿಗೆ. ಪರಮ ಪೋಲಿ ಸಾಹಿತ್ಯದಿಂದ ಹಿಡಿದು, ಪರಮಾತೀತ ಗಂಭೀರ ಸಾಹಿತ್ಯದ ತಂಕ ಎಲ್ಲ ಬರೆಯುತ್ತೇನೆ. ದಿನಕ್ಕೆ 18 ತಾಸು ಕೆಲಸ ಮಾಡಬಲ್ಲೆ. ಬಂಗಾರ, ಕಾರು, ಡ್ರೆಸ್ಸು ಮುಂತಾದ ಯಾವ ಸಂಗತಿಗಳಲ್ಲೂ ನನಗೆ ಆಸಕ್ತಿ ಇಲ್ಲ. ನಾನು ಸಾಲ ಕೊಡಲ್ಲ ಮತ್ತು ಕೇಳಲ್ಲ. ನಂಗೆ ನನ್ನದೇ ಆದ ಕಾಡು ದುಖ್ಖವಿದೆ. ಒಬ್ಬನೇ ಮಲಗಿ ಬಿಕ್ಕಿ ಬಿಕ್ಕಿ ಅಳುತ್ತೇನೆ. ದಿನಗಟ್ಟಲೆ chember ನಿಂದ ಹೊರಬೀಳಲ್ಲ. ಸಿನೆಮಾದಲ್ಲಿ ನಟಿಸೋ ಹುಚ್ಚು ಇಲ್ಲ. ಕೆಲವು ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಆಡಿಯೋ ಸಿ.ಡಿ ತುಂಬಾ ಜನಪ್ರಿಯ.
ಇದಿಷ್ಟು ನನ್ನ ಪರಿಚಯ. ಉಳಿದದ್ದು ನಿಮ್ಮ ಊಹೆ. ಈಗ ಕೊಂಚ ಮನಸು ತಹಬಂದಿಗೆ ಬಂದಿದೆ. ಆತ್ಮ ಹತ್ಯೆ ವಿಚಾರ ರದ್ದಾಗಿದೆ ಇಷ್ಟು ಸಾಕಲ್ಲ?

Screenshot_2016-08-28-12-04-57 ravi belegere

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!