Sunday , July 22 2018
ಕೇಳ್ರಪ್ಪೋ ಕೇಳಿ
Home / Gulf News / ಮಡದಿಯ ಶವವನ್ನು 10 ಕಿಲೋ ಮೀಟರ್ ಹೊತ್ತು ಸಾಗಿದ ಬಡವನಿಗೆ ಬಹರೀನ್ ಪ್ರಧಾನಿ ನೆರವು

ಮಡದಿಯ ಶವವನ್ನು 10 ಕಿಲೋ ಮೀಟರ್ ಹೊತ್ತು ಸಾಗಿದ ಬಡವನಿಗೆ ಬಹರೀನ್ ಪ್ರಧಾನಿ ನೆರವು

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಮನಾಮಾ : ಮೊನ್ನೆ ಭಾರತದ ಒಡಿಸ್ಸಾದ ಹಳ್ಳಿಯೊಂದರಲ್ಲಿ ಹೃದಯ ವಿದ್ರಾವಕ ಸನ್ನಿವೇಶ ನಡೆದಿತ್ತು. ಜಿಲ್ಲಾಸ್ಪತ್ರೆಯೊಂದು ಹಣ ಕೊಡದ ಬಡವನಿಗೆ ತನ್ನ ಹೆಂಡತಿಯ ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ನೀಡದೆ ಸತಾಯಿಸಿತ್ತು. ಇದರೊಂದಿಗೆ ನೊಂದ ದಾನಾ ಮಾಂಜಿ ತನ್ನ ಮಗಳೊಂದಿಗೆ ಹೆಂಡತಿಯ ಶವವನ್ನು ತಾನೇ ಭುಜದ ಮೇಲೆ ಹೊತ್ತು 60 ಕಿಲೋ ಮೀಟರ್ ದೂರದ ಹಳ್ಳಿಗೆ ನಡೆದುಕೊಂಡು ಸಾಗಿದರು. ಹೀಗೆ ಪತ್ನಿಯ ಶವವನ್ನು ಹೊತ್ತು 10 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದ ಮಾಂಜಿಯನ್ನು ಮಾಧ್ಯಮಗಳು ಕಂಡವು. ಬಳಿಕ ಇವರ ಕಷ್ಟ ಅರಿತು ಮಾಧ್ಯಮದವರೇ ಮಾಂಜಿ ಪತ್ನಿಯ ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಸಹಾಯ ಮಾಡಿದ್ದರು… ಈ ಸುದ್ದಿ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಅದೆಷ್ಟೋ ಜನ ಬಡವನ ಈ ಕಷ್ಟಕ್ಕೆ ಮರುಗಿದರು…baharin pmಇದೀಗ ಈ ಸುದ್ದಿಯನ್ನು ಕಂಡ ಬಹರೀನ್ ಪ್ರಧಾನಿ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಅವರು ಕೂಡಾ ಮರುಗಿದ್ದಾರೆ. ತಕ್ಷಣ ಮಾಂಜಿಗೆ ಸಹಾಯ ಮಾಡಬೇಕೆಂದು ಬಯಸಿದ ಪ್ರಧಾನಿ ಭಾರತೀಯ ರಾಯಭಾರಿ ಕಚೇರಿ ಮೂಲಕ ಹಣಕಾಸಿನ ನೆರವನ್ನೂ ನೀಡಿದ್ದಾರೆ. ಈ ಮೂಲಕ ಮಾಂಜಿ ಕಷ್ಟಕ್ಕೆ ಸ್ಪಂದಿಸಿರುವ ಬಹರೀನ್ ಪ್ರಧಾನಿ ವಿಶ್ವದ ಗಮನ ಸೆಳೆದಿದ್ದಾರೆ….

ಮಾಂಜಿಯ ಸಂಕಷ್ಟದ ಕತೆಯನ್ನು ಬಹರೀನ್‍ನ ಪ್ರಮುಖ ಪತ್ರಿಕೆಯೊಂದು ಮುಖಪುಟದಲ್ಲೇ ಪ್ರಕಟಿಸಿತ್ತು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!