Friday , April 20 2018
Home / Sudina Special / ಇದಲ್ಲವೇ ಧರ್ಮ ಸಾಮರಸ್ಯ…? : ಆಟೋದಲ್ಲಿ ಬಂದ ಪ್ರಯಾಣಿಕನ ನಮಾಜ್‍ಗೆ ತೊಂದರೆಯಾಗಬಾರದೆಂದು ಹಣವೇ ಪಡೆಯದ ಹಿಂದೂ ಚಾಲಕ

ಇದಲ್ಲವೇ ಧರ್ಮ ಸಾಮರಸ್ಯ…? : ಆಟೋದಲ್ಲಿ ಬಂದ ಪ್ರಯಾಣಿಕನ ನಮಾಜ್‍ಗೆ ತೊಂದರೆಯಾಗಬಾರದೆಂದು ಹಣವೇ ಪಡೆಯದ ಹಿಂದೂ ಚಾಲಕ

ಮುಂಬೈ : ಇದು ನಿಜವಾದ ಧರ್ಮ ಸಾಮರಸ್ಯ… ಎಲ್ಲಿಯ ಹಿಂದೂ ಆಟೋ ಚಾಲಕ… ಎಲ್ಲಿಯ ಮುಸ್ಲಿಂ ಯುವಕ… ಆದರೂ ಜೊತೆಯಾದರು, ಮಾನವೀಯ ಸಂಬಂಧಕ್ಕೆ ಕೊಂಡಿಯಾದರು…

ನಡೆದದ್ದು ಇಷ್ಟು : ಆಗಸ್ಟ್ 26 ರಂದು ರಮೀಝ್ ಶೇಖ್ ಎಂಬ ವ್ಯಕ್ತಿ ಶುಕ್ರವಾರದ ತನ್ನ ನಮಾಜ್‍ಗೆಂದು ತುರಾತುರಿಯಲ್ಲಿ ಓಡಿ ಬಂದು ಆಟೋ ಹತ್ತಿದರು. ಆದರೆ, ತಾನು ಪರ್ಸ್ ಆಫೀಸ್‍ನಲ್ಲಿ ಬಿಟ್ಟು ಬಂದ ವಿಷಯ ಆಟೋ ಹತ್ತಿದ ಮೇಲೆ ಇವರಿಗೆ ತಿಳಿಯಿತು. ಹಿಂದೆ ಹೋದರೆ ನಮಾಜ್‍ಗೆ ತೊಂದರೆ ಆಗುತ್ತದೆ. ಹೀಗಾಗಿ, ನಮಾಜ್ ಮುಗಿಯುವ ತನಕ ನಿಂತು ಆಟೋದಲ್ಲಿ ಮತ್ತೆ ಆಫೀಸ್ ಕಡೆ ಬಿಡಿ ಎಂದು ಆಟೋ ಚಾಲಕ ಶುಕ್ಲಾರಿಗೆ ಹೇಳಿದರು. ಈ ಮಾತನ್ನು ಕೇಳಿದ ಶುಕ್ಲಾ ಏನೂ ತೊಂದರೆ ಇಲ್ಲ. ತಾವು ದೇವರ ಕೆಲಸಕ್ಕೆಂದು ಹೋಗುತ್ತಿದ್ದೀರಿ. ದೇವರ ಕೆಲಸಕ್ಕೆ ತೊಂದರೆ ಆಗಬಾರದು. ನಿಮ್ಮನ್ನು ಮಸೀದಿಗೆ ಬಿಡುತ್ತೇನೆ ಎಂದು ಹೇಳಿದರು ಜೊತೆಗೆ, ಮಸೀದಿ ಬಳಿ ಇಳಿಸಿ ತನ್ನ ಕೈಯಲ್ಲಿದ್ದ ಒಂದಷ್ಟು ಹಣ ನೀಡಿ ಸುರಕ್ಷಿತವಾಗಿ ಆಫೀಸ್ ಸೇರಿ ಎಂದು ಹೇಳಿ ತಾವು ತಮ್ಮ ಮುಂದಿನ ಪ್ರಯಾಣವನ್ನು ಮುಂದುವರಿಸಿದರು… ಈ ಹೃದಯಸ್ಪರ್ಶಿ ಸನ್ನಿವೇಶದಿಂದ ರಮೀಝ್ ಒಂದು ಕ್ಷಣ ಮೂಕವಿಸ್ಮಿತರಾಗಿದ್ದರು… ಅಲ್ಲದೆ, ಇದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ… ಇಲ್ಲಿದೆ ನೋಡಿ ಶೇಖ್ ಬರಹ… auto driver 3 auto driver 4

About sudina

Check Also

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ …

Leave a Reply

Your email address will not be published. Required fields are marked *

error: Content is protected !!