Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ರವಿ ಬೆಳಗೆರೆ ಮನದ ನೋವು : ಮೋಸ ಹೋದ ಬಗ್ಗೆ ಬೇಸರ

ರವಿ ಬೆಳಗೆರೆ ಮನದ ನೋವು : ಮೋಸ ಹೋದ ಬಗ್ಗೆ ಬೇಸರ

ಬೆಂಗಳೂರು : ಹಿರಿಯ ಪತ್ರಕರ್ತ ರವಿ ಬೆಳಗೆರೆ ಮೊನ್ನೆ ತನಗಾದ ನೋವನ್ನು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. (Read Also : ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡ ರವಿ ಬೆಳಗೆರೆ)ಈಗ ಮತ್ತೊಂದು ಭಾರಿ ತನಗಾದ ಮೋಸದ ಬಗ್ಗೆ ರವಿ ಬರೆದುಕೊಂಡಿದ್ದಾರೆ… ಇಲ್ಲಿದೆ, ರವಿ ಬರಹದ ಪೂರ್ಣ ಪಾಠ…

ನಾನು ಕಿರಿ ಕಿರಿ ಮನುಷ್ಯ ಅಲ್ಲ. ಸಿಡಿಮಿಡಿ ಇಲ್ಲ. ಸಿಟ್ಟು ಮೊದಲಿತ್ತು. ಈಗ ಮರೆತೇ ಹೋಗಿದೆ. ಈಗಲೂ ಒಮ್ಮೊಮ್ಮೆ ಗುರ್ರ್ ಅಂತೀನಿ. ದ್ವೇಷ ನನ್ನ ಜಾಯಮಾನವಲ್ಲ. ಅಸಹ್ಯವಾದರೆ ದೂರ ಸರಿದುಬಿಡ್ತೇನೆ. ನನ್ನದು ಇಂಟೆನ್ಸ್ ಆದ ಪ್ರೀತಿ. ತೀವ್ರವಾಗಿ ಪ್ರೀತಿಸುತ್ತೇನೆ. ಕೆಲಬಾರಿ ಅವರಿಗೆ ಕಿರಿಕಿರಿ ಆಗುವಷ್ಟು. ಮಾತು, ಹರಟೆ, ನಗು, ಕೊಂಚ ಪೋಲಿತನ, ಇಂಟೆನ್ಸ್ ಆದ ಕಾಮ, ಅತಿಯಾದ ಭಾವುಕತೆ, ಅಮ್ಮನ ನಾಸ್ಟಾಲ್ಜಿಯಾ, ಅವಳನ್ನು ಎಲ್ಲರಲ್ಲೂ ಹುಡುಕೋದು…..ಇವೆಲ್ಲ ನನ್ನ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್. ಆದರೆ ಮೋಸ ಸಹಿಸೋದು ತುಂಬಾ ಕಷ್ಟ. ಮೋಸ ನನಗೆ ಆಗಿದ್ದರೂ ನರಳೋದು ನಾನೇ. ತಪ್ಪು ಮಾಡಿದೋರನ್ನ ಕ್ಷಮಿಸಬಹುದು. ಮೋಸ ಮಾಡಿದೋರನ್ನ ಕ್ಷಮಿಸೋಕಾಗಲ್ಲ. ಯಾಕೆಂದರೆ, ಚೆನ್ನಾಗಿ ಯೋಚನೆ ಮಾಡಿ, ಪ್ಲಾನ್ ಮಾಡಿಉದ್ದೇಶವಿಟ್ಟುಕೊಂಡೇ ಅವರು ಮೋಸ ಮಾಡಿರುತ್ತಾರೆ. ಗೊತ್ತಿಲ್ಲದೆ ಮೋಸ ಮಾಡಿಬಿಟ್ಟೆ ಅನ್ನೋಕೆ ಆಗಲ್ಲ.

ಗೊತ್ತಿಲ್ಲದೆ ತಪ್ಪು ಮಾಡಿದೆ ಅನ್ನಬಹುದು.  ನಾನು ತುಂಬಾ ಹುಷಾರು, ನಂಗೆ ಯಾರೂ ಮೋಸ ಮಾಡೋಕಾಗಲ್ಲ, ನಾನು ಮೈ ಮರೆಯಲ್ಲ ಅಂತೆಲ್ಲ ಹೇಳಿಕೊಳ್ತಿದ್ದೆ. But, ಒಂದು ಮೋಸ ಹೇಗೆ ಆಯಿತು ಅಂದ್ರೆ, ಅವತ್ತೇ ನಾನು ಸತ್ತು ಹೋಗಿಬಿಟ್ಟೆ. ನಂಗೆ ಗೊತ್ತು, ನಾನು ಈ ಜನ್ಮದಲ್ಲಿ ಅದರಿಂದ ಚೇತರಿಸಿಕೊಳ್ಳಲಾರೆ. ಒಬ್ಬ ಗೆಳೆಯ ಬಂದು
‘ ಆದದ್ದು ಆಯಿತು. ಕ್ಷಮಿಸಿ ಮತ್ತೆ ರಾಜಿ ಆಗಿಬಿಡು’ ಅಂದ. ” ನೋಡೋ, ನನ್ನ ಆಫೀಸ್ ನ ಒಂದು ರೌಂಡ್ ಹಾಕಿ ಬಾ. ಎಲ್ಲೊ ಒಂದು ಕಡೆ ನಿಂಗೆ ಕೊಳಕು ಕಾಣಬಹುದು. ಆದರೆ ಬಾತ್ ರೂಮ್ ನಲ್ಲಿ ಒಂದು ಹನಿ ನೀರೂ ಚೆಲ್ಲಿರಲ್ಲ. ಹೇಟ್ ಇಟ್. ಅದು ತುಂಬಾ ಕ್ಲೀನ್ ಆದ ಜಾಗ. ಹಾಗಂತ ವಿಸರ್ಜನೆ ಮಾಡೋ ಜಾಗದ ಪಕ್ಕ ಕೂತು ಊಟ ಮಾಡೋಕೆ ಆಗಲ್ಲ” ಅಂದೆ . ಅವನು ಸುಮ್ಮನಾದ.

ನೀವು ರಾಕುಮಾರಿ ಡಯಾನಾ ಫೋಟೋ ನೋಡಿ. ಇಷ್ಟ ಆಗ್ತಾಳೆ. ಆಕೆ ಸುಂದರಿ. ಆದರೆ ಎಂಥ ವಂಚಕಿ! ರಾಕುಮಾರ ಚಾರ್ಲ್ಸ್ ಅದನ್ನು ಹೇಳಿಕೊಂಡಿಲ್ಲ. ಅನುಭವಿಸಿದ ನೋವು ಸುಳ್ಳು ಅಂತೀರಾ? ನಂಗೆ ತಾಯಿ ಥೆರೇಸ ತುಂಬಾ ಇಷ್ಟ. ನೋಡಲು ಪರಮ ಕುರೂಪಿ. ಆದರೆ ವಂಚಕಿಯಲ್ಲ. ಅಲ್ಲವಾ.

ಕೆಲವು ವಿಷಯಗಳಲ್ಲಿ ನಾನು ಬೆರಗಾಗುವಷ್ಟು ಪ್ರಾಮಾಣಿಕ. ಉದಾಹರಣೆಗೆ ದುಡ್ಡು . ಯಾರಿಗೂ ನಾನು ಮೋಸ ಮಾಡಿಲ್ಲ. ಕಂಡವರ ಹಣ ಮುಟ್ಟಿಲ್ಲ. ಉಳಿದಂತೆ ನಾನು ಬೇಲಿ ಹಾರಿದ್ದುಂಟು. ನನ್ನನ್ನ ಯಾರೂ ಒಂದು ಚೌಕಟ್ಟು ಹಾಕಿ ಇಡಲಾರರು. ತಪ್ಪು ಮಾಡಿದ್ದೇನೆ. ಅದು ಗೊತ್ತಾಗುವಂತೆ, ಚೆನ್ನಾಗಿ ತಿಳಿಸಿ ಮಾಡಿದ್ದೇನೆ. ಕ್ಷಮೆ ಕೇಳಿದ್ದೇನೆ. ಆದರೆ ಮೋಸ ಮಾಡಿಲ್ಲ. ಅನುಮಾನ ಇದೆಯಾ?Screenshot_2016-08-30-14-21-33Screenshot_2016-08-30-14-22-04

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!