Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಜೊತೆಜೊತೆಯಲಿ : ಕುಲಾಲ ಕುಟುಂಬಗಳ ಸಮ್ಮಿಲನ

ಜೊತೆಜೊತೆಯಲಿ : ಕುಲಾಲ ಕುಟುಂಬಗಳ ಸಮ್ಮಿಲನ

ಬಂಟ್ವಾಳ ಬ್ಯುರೋ ವರದಿ
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಕುಲಾಲ ಕುಟುಂಬಗಳ ಸಮ್ಮಿಲನದ ವಿನೂತನ ಕಾರ್ಯಕ್ರಮ `ಜೊತೆಜೊತೆಯಲಿ’ ಬಿ.ಸಿ.ರೋಡು ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ವೈಶಿಷ್ಟಪೂರ್ಣವಾಗಿ ನಡೆಯಿತು.

ತುಳುಚಿತ್ರ ನಿರ್ದೇಶಕ ಸುಹಾನ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಲಾಲ ಸಮುದಾಯದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಅವರು ಹೇಳಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕಾರ್ಯದರ್ಶಿ ಮನೋಹರ ನೇರಂಬೋಳು, ಕುಲಾಲ ಸೇವಾದಳಪತಿ ಯಾದವ ಅಗ್ರಬೈಲು, ಕಾರ್ಯದರ್ಶಿ ಸದಾನಂದ ಬಂಗೇರಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ನಾಟಕ ಕಲಾವಿದರಾದ ಎಚ್ಕೆ ನಯನಾಡು, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಅರುಣ್‍ಚಂದ್ರ, ನಿತಿನ್ ತುಂಬೆ, ಪಾಂಡುರಂಗ, ನಾಟಕಕಾರ ಗಿರಿಯಪ್ಪ ಬದ್ಯಾರ್, ಚಿತ್ರ ನಿರ್ದೇಶಕ ಎನ್‍ಆರ್ಕೆ ವಿಶ್ವನಾಥ, ಯಕ್ಷಗಾನ ಕಲಾವಿದರಾದ ಕೈರಂಗಳ ಕೃಷ್ಣ ಮೂಲ್ಯ, ಜಗದೀಶ ನಲ್ಕ ಅಮ್ಮುಂಜೆ, ಗಣೇಶ ಚಂದ್ರಮಂಡಲ, ಹರೀಶ್ ವೇಣೂರು, ದಿನೇಶ್ ಕುಲಾಲ್ ಸಿದ್ದಕಟ್ಟೆ, ಸದಾಶಿವ ಕುಲಾಲ್ ವೇಣೂರು, ಹರಿಪ್ರಸಾದ್, ಶಂಭುಕುಲಾಲ್ ಕಿನ್ನಿಗೊಳಿ ಅವರಿಗೆ ಕುಲಾಲ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುಲಾಲ ಸಮುದಾಯದ ಬಂಧುಗಳಿಗೆ ವಿವಿಧ ಮನೋರಂಜನಾ ಆಟಗಳನ್ನು ನಡೆಸಲಾಯಿತು. ಮಾತೃ ಸಂಘದ ಗೌರವ ಕಾರ್ಯದರ್ಶಿ ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರಾಧಕೃಷ್ಣ ಬಂಟ್ವಾಳ್ ಹಾಗೂ ಚೆನ್ನಕೇಶವ ಮಾಸ್ತರ್ ತೀರ್ಪುಗಾರರಾಗಿ ಸಹಕರಿಸಿದರು. ಸೇವಾದಳದ ಪ್ರಮುಖರಾದ ಸುಕುಮಾರ್ ಬಂಟ್ವಾಳ್, ಗಣೇಶ್ ಕುಲಾಲ್, ರಾಜೇಶ್ ಭಂಡಾರಿಬೆಟ್ಟು, ಡಾ. ಬಾಲಕೃಷ್ಣ ಅಗ್ರಬೈಲು, ಕಿಶೋರ್ ಕುಲಾಲ್, ಯೋಗೀಶ ದುಗನಕೋಡಿ, ಕವಿತಾ ಯಾದವ್ ಸಹಕರಿಸಿದರು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!