Sunday , September 23 2018
ಕೇಳ್ರಪ್ಪೋ ಕೇಳಿ
Home / News NOW / 16 ವರ್ಷದ ಬಾಲಕನಿಗೆ ಮದುವೆಯಾಗುವಂತೆ ಒತ್ತಾಯ : ಮಹಿಳೆ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು…! ಇದು ಮೊದಲ ಪ್ರಕರಣ

16 ವರ್ಷದ ಬಾಲಕನಿಗೆ ಮದುವೆಯಾಗುವಂತೆ ಒತ್ತಾಯ : ಮಹಿಳೆ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು…! ಇದು ಮೊದಲ ಪ್ರಕರಣ

ಮೀರತ್ : ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕರ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗುವುದನ್ನು ನಾವು ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ವಿರುದ್ಧ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ಸ್ ಫ್ರಂ ಸೆಕ್ಸುವಲ್ ಅಫೆನ್ಸ್ ಅರ್ಥಾತ್ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ದೂರು ದಾಖಲಿಸಿಕೊಳ್ಳಲಾಗಿದೆ. ಸಹರಾನ್‍ಪುರ ಪೊಲೀಸ್ ಠಾಣೆಯಲ್ಲಿ 23 ವರ್ಷದ ಮಹಿಳೆ ಮೇಲೆ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಲಯದ ಆದೇಶದಂತೆ ಪೊಲೀಸರು ಈ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿತ ಮಹಿಳೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆ ಎಂದು 16 ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿದ್ದ…

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆರೋಪಿತ ಮಹಿಳೆ ಕೆಲವೊಂದು ವೀಡಿಯೋ ಕ್ಲಿಪಿಂಗ್ಸ್‍ಗಳನ್ನು ಬಾಲಕನಿಗೆ ತೋರಿಸಿ ಲೈಂಗಿಕವಾಗಿ ಪ್ರಚೋದನೆ ಮಾಡಲು ಯತ್ನ ಮಾಡುತ್ತಿದ್ದಳಂತೆ. ಅಲ್ಲದೆ, ಮಹಿಳೆಯೊಂದಿಗೆ ಇರುವ ವೀಡಿಯೋವನ್ನು ಬಹಿರಂಗ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಳಂತೆ. ಹೀಗಾಗಿ, ಬಾಲಕನ ಅಣ್ಣ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಇದಾದ ಬಳಿಕ ಬಾಲಕನ ಅಣ್ಣ ಕೋರ್ಟ್‍ಗೆ ಮೊರೆ ಹೋದರು. ಹೀಗಾಗಿ, ತನಿಖೆ ನಡೆಸುವಂತೆ ಕೋರ್ಟ್ ಪೊಲೀಸರಿಗೆ ಆದೇಶ ನೀಡಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!