Monday , January 22 2018
Home / Film News / Bollywood / ಅಜಯ್ ದೇವಗನ್‍ರನ್ನು ಕಾಜೋಲ್ ಮದುವೆಯಾಗಿದ್ದು ಯಾಕೆ…? : 17 ವರ್ಷದ ಬಳಿಕ ಕಾರಣ ಬಿಚ್ಚಿಟ್ಟ ನಟಿ
Buy Bitcoin at CEX.IO

ಅಜಯ್ ದೇವಗನ್‍ರನ್ನು ಕಾಜೋಲ್ ಮದುವೆಯಾಗಿದ್ದು ಯಾಕೆ…? : 17 ವರ್ಷದ ಬಳಿಕ ಕಾರಣ ಬಿಚ್ಚಿಟ್ಟ ನಟಿ

ಮುಂಬೈ : ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್‍ನ ಆದರ್ಶ ದಂಪತಿ. 1999ರಲ್ಲಿ ಕಾಜೋಲ್ ಅಜಯ್ ದೇವಗನ್‍ರನ್ನು ಮದುವೆಯಾಗಿದ್ದರು. ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿ ಇರುವಾಗಲೇ ಕಾಜೋಲ್ ಅಜಯ್ ಬಾಳಸಂಗಾತಿಯಾಗಿ ಬಂದರು. ಈ ದಂಪತಿಗೆ ಈಗ ನ್ಯಾಸ ಮತ್ತು ಯೂಗ್ ಎಂಬ ಇಬ್ಬರು ಮಕ್ಕಳಿದ್ದಾರೆ… ಈ ದಂಪತಿ ಈಗ ಸುಖದಾಂಪತ್ಯ ಮಾಡುತ್ತಿದ್ದಾರೆ… ಈ ಸುಖ ಜೀವನದ ನಡುವೆ ಕಾಜೋಲ್ `ವೃತ್ತಿಯ ಉತ್ತುಂಗದಲ್ಲಿರುವಾಗಲೇ ತಾನೇಕೆ ಅಜಯ್‍ರನ್ನು ಮದುವೆಯಾಗಿದ್ದೇನೆ’ ಎಂಬುದನ್ನು 17 ವರ್ಷದ ಬಳಿಕ ಬಿಚ್ಚಿಟ್ಟಿದ್ದಾರೆ…

`ಚಿತ್ರರಂಗದಲ್ಲಿ ಎಂಟರಿಂದ ಒಂಬತ್ತು ವರ್ಷ ಕಳೆದಿದ್ದೆ. ಹೀಗಾಗಿ, ಬದುಕಿನ ಮತ್ತೊಂದು ಘಟ್ಟಕ್ಕೆ ಪಾದರ್ಪಣೆ ಮಾಡಲು ಇದು ಸರಿಯಾದ ಸಮಯ ಎಂದು ನನಗೆ ತಿಳಿಯಿತು. ಹೀಗಾಗಿ, ನಾನು ನಟನೆ ಜೀವನಕ್ಕೆ ಕೊಂಚ ಬ್ರೇಕ್ ಕೊಟ್ಟು ವರ್ಷಕ್ಕೆ ಒಂದೇ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧರಿಸಿದೆ. ಇದಕ್ಕಿಂತ ಮೊದಲು ವರ್ಷಕ್ಕೆ ನಾಲ್ಕರಿಂದ ಐದು ಚಿತ್ರಗಳನ್ನು ನಾನು ಮಾಡುತ್ತಿದ್ದೆ. ಆದರೆ, ಈ ರೀತಿ ನಟನೆಯನ್ನು ಮುಂದುವರಿಸುವುದು ನನಗೆ ಇಷ್ಟ ಇರಲಿಲ್ಲ. ಹೀಗಾಗಿ, ಮದುವೆಯಾಗಿ ಬದುಕಿನ ಇನ್ನೊಂದು ಘಟ್ಟಕ್ಕೆ ಪ್ರವೇಶಿಸಿ ಬಳಿಕ ವರ್ಷಕ್ಕೆ ಒಂದು ಚಿತ್ರ ಮಾಡಲು ನಾನು ನಿರ್ಧರಿಸಿದ್ದೆ. ಹಾಗೆಯೇ ಮಾಡಿದೆ. ಇದರಿಂದ ನಾನು ಖುಷಿಯಲ್ಲಿದ್ದೇನೆ’ ಎಂದು ಕಾಜೋಲ್ ಹೇಳಿದ್ದಾರೆ.

2003ರಲ್ಲಿ ಮಗಳು ಹುಟ್ಟಿದ ಬಳಿಕ ಕಾಜೋಲ್ ಕೆಲವೊಂದು ಚಿತ್ರಗಳಲ್ಲಿ ನಟಿಸುವುದಕ್ಕೆ ಮತ್ತೆ ಆರಂಭಿಸಿದ್ದರು. ಫಾನಾ, ಮೈ ನೇಮ್ ಇಸ್ ಖಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಜೋಲ್ ನಟಿಸಿದ್ದರು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!