Saturday , October 20 2018
ಕೇಳ್ರಪ್ಪೋ ಕೇಳಿ
Home / News NOW / ಮದರ್ ತೆರೇಸಾರಿಗೆ ಸಂತ ಪದವಿ : ಭಾರತೀಯರಲ್ಲಿ ಹರ್ಷ

ಮದರ್ ತೆರೇಸಾರಿಗೆ ಸಂತ ಪದವಿ : ಭಾರತೀಯರಲ್ಲಿ ಹರ್ಷ

ವ್ಯಾಟಿಕನ್ : ಮದರ್ ತೆರೇಸಾ, ನಿಸ್ವಾರ್ಥ ಸೇವೆಗೆ ಅನ್ವರ್ಥ. ತೆರೇಸಾ ಬಡವರ ಪಾಲಿನ ದೇವರು. ಇಂತಹ ಮಹಾಮಾತೆ ಈಗ ಸಂತ ಪದವಿಗೇರಿದ್ದಾರೆ.

ಅಸಹಾಯಕರ ಸೇವೆಗೆಂದೇ ಜೀವನವನ್ನು ಮುಡಿಪಾಗಿಟ್ಟ ತೆರೇಸಾ ಈಗ ಸಂತ ಪದವಿಗೇರಿದ್ದಾರೆ. ವ್ಯಾಟಿಕನ್ ಸಿಟಿಯಲ್ಲಿರುವ ರೋಮನ್ ಕ್ಯಾಥೋಲಿಕ್ ಚರ್ಚ್ ನಲ್ಲಿ  ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ತೆರೇಸಾರಿಗೆ ಸಂತ ಪದವಿ ಪ್ರದಾನ ಮಾಡಿದ್ದಾರೆ… 1997ರಲ್ಲಿ ತೆರೇಸಾ ದೈವಾಧೀನರಾಗಿದ್ದರು. ಇದಾಗಿ 19 ವರ್ಷಗಳ ಬಳಿಕ ತೆರೇಸಾ ಅವರಿಗೆ ಸಂತ ಪದವಿ ಸಿಕ್ಕಿದೆ.

mother theresa 3ಪ್ರಪಂಚದ ವಿವಿಧ ಮೂಲೆಗಳಿಂದ ಲಕ್ಷಾಂತರ ಮಂದಿ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಇನ್ನು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಕೇಂದ್ರದಿಂದ 12 ಮಂದಿಯ ತಂಡ ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಅದೂ ಅಲ್ಲದೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎರಡೂ ರಾಜ್ಯಗಳ ಪ್ರತಿನಿಧಿಗಳ ತಂಡ ಸಹ ಈ ಸಮಾರಂಭದಲ್ಲಿ ಪಾಲ್ಗೊಂಡು ಮಹಾಮಾತೆಗೆ ನಮನ ಸಲ್ಲಿಸಿದರು.

A nun, belonging to the global Missionaries of Charity, carries a relic of Mother Teresa of Calcutta before a mass celebrated by Pope Francis for her canonisation in Saint Peter's Square at the Vaticanರೋಮನ್ ಕ್ಯಾಥೋಲಿಕ್ ಸನ್ಯಾಸಿನಿ ಆಗಿದ್ದ ಮದರ್ ತೆರೇಸಾ ಅವರ ಮೂಲ ಹೆಸರು ಆಗ್ನೆಸ್ ಗೋಂಕ್ಸಾ ಬೊಜಾಕ್ಸಿಯು. 1910ರಲ್ಲಿ ಈಗಿನ ಮಸೆಡೊನಿಯಾ ರಾಜಧಾನಿ `ಸ್ಕೋಪ್‍ಜೆ’ನಲ್ಲಿ ಅಲ್ಬೇನಿಯನ್ನರ ಕುಟುಂಬದಲ್ಲಿ ಜನನ. 1926ರಲ್ಲಿ ಸನ್ಯಾಸತ್ವ ಸ್ವೀಕಾರ. 1929ರಲ್ಲಿ ಕೊಲ್ಕೊತ್ತಾಗೆ ಬಂದ ಇವರು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. 1946ರಲ್ಲಿ  ಬಡವರ ಸೇವೆಗಾಗಿ ಮಿಷನರಿ ಆಫ್ ಚಾರಿಟಿ ಸ್ಥಾಪನೆ. 1951ರಲ್ಲಿ ಇವರಿಗೆ ಭಾರತೀಯ ಪೌರತ್ವ ಪ್ರದಾನ. ತಮ್ಮ ಇಡೀ ಜೀವನವನ್ನು ಇವರು ಸೇವೆಗೆ ಸಮರ್ಪಿಸಿದವರು. ಕೋಲ್ಕತಾದಲ್ಲಿ ಹಲವು ವರ್ಷಗಳ ಕಾಲ ರೋಗಿಗಳ, ದೀನರ ಸೇವೆ ಮಾಡಿದರು. ಮಿಷನರಿ ಮೂಲಕ ಅವರು ಈ ಸೇವೆಯನ್ನು ಮಾಡಿದ್ದು, ಜಗತ್ತಿನಲ್ಲೇ ಇದಕ್ಕಾಗಿ ಪ್ರಸಿದ್ಧರಾಗಿದ್ದಾರೆ. 1946 ಸೆ,10ರಂದು ತೆರೇಸಾ ಅವರು ಸೇವೆಗಾಗಿಯೇ ಮುಡಿಪಾಗಿಟ್ಟ “ಮಿಷನರೀಸ್ ಆಫ್ ಚಾರಿಟಿ’ಯನ್ನು ಕೋಲ್ಕತಾದಲ್ಲಿ ಆರಂಭಿಸಿದ್ದರು. ಇದಕ್ಕೆ ವ್ಯಾಟಿಕನ್‍ನ ಅನುಮತಿಯೂ ಇತ್ತು. ಕೋಲ್ಕತಾ ಧರ್ಮಪ್ರಾಂತ್ಯದ ಅಡಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದೀನರು, ನಿರ್ಗತಿಕರು, ಬಡವರು, ಅನಾಥರು, ರೋಗಿಗಳ ಚಿಕಿತ್ಸೆ, ಆರೈಕೆ, ಪುನರ್ವಸತಿ ಕೆಲಸಕ್ಕಾಗಿ ಮಾಡಲಾಗಿತ್ತು. ಕುಷ್ಟ ರೋಗಿಗಳಿಂದ ಹಿಡಿದು, ಏಡ್ಸ್ ರೋಗಿಗಳ ತನಕ ಎಲ್ಲಾ ರೀತಿಯ ರೋಗಿಗಳ ಸೇವೆಗಳನ್ನು ಈ ಕೇಂದ್ರ ಮಾಡಿದೆ.

mother theresa 2ಒಬ್ಬರು ಸಂತ ಪದವಿಗೇರುವುದೆಂದರೆ ಅದರು ಸಾಮಾನ್ಯದ ವಿಷಯವಲ್ಲ. ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಒಬ್ಬ ವ್ಯಕ್ತಿ ನಿಧನರಾದ ಐದು ವರ್ಷಗಳ ನಂತರ ಅವರ ಯಾವುದಾದರೂ ಒಂದು ಪ್ರಮುಖ ಪವಾಡ ಸಾಬೀತಾದರೆ, ಅಂತಹ ವ್ಯಕ್ತಿ ಸ್ವರ್ಗ ಪ್ರಾಪ್ತರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಈ ಸ್ವರ್ಗಪ್ರಾಪ್ತಿ ಘೋಷಣೆ ಆದ ಬಳಿಕವೂ ಒಂದು ಪವಾಡ ಸಾಬೀತಾಗಬೇಕು. ಆ ಬಳಿಕ ಸಂತ ಪದವಿ ಪ್ರಾಪ್ತವಾಗುತ್ತದೆ. ಮದರ್ ತೆರೇಸಾ ಅವರನ್ನು ಸಂತ ಪದವಿಗೇರಲು ಇರುವ ಕಾರಣ ಪ್ರಮುಖವಾಗಿ ಎರಡು. 2003ರಲ್ಲಿ ಕೋಲ್ಕತಾದ ಮಹಿಳೆಯೊಬ್ಬರು ತೆರೇಸಾರನ್ನು ಪ್ರಾರ್ಥಿಸಿದಾಗ ಅವರ ದೇಹದಲ್ಲಿದ್ದ ಗೆಡ್ಡೆ ಗುಣವಾಯಿತು. ಇದೊಂದು ಪವಾಡ ಎಂದು ವ್ಯಾಟಿಕನ್ ಘೋಷಣೆ ಮಾಡಿತ್ತು. ಇದು ಮದರ್ ತೆರೇಸಾರ ಒಂದನೇ ಪವಾಡ. ಬಳಿಕ 2008ರಲ್ಲಿ ತೆರೇಸಾ ಅವರನ್ನು ಪ್ರಾರ್ಥಿಸಿದ್ದರಿಂದ ತನ್ನ ಮೆದುಳಿನ ಸೋಂಕು ವಾಸಿಯಾಗಿದೆ ಎಂದು ಬ್ರೆಜಿಲ್‍ನ ವ್ಯಕ್ತಿ ಹೇಳಿದ್ದರು. ಪ್ರಾಜ್ಞರ ಪರಿಶೀಲನೆಯ ಬಳಿಕ ಇದೂ ಕೂಡಾ ನಿಜ ಎಂಬುದನ್ನು ವ್ಯಾಟಿಕನ್ ಮಾನ್ಯ ಮಾಡಿತ್ತು. ಈ ಎರಡು ಪ್ರಮುಖ ಪವಾಡಗಳಿಗೆ ವ್ಯಾಟಿಕನ್ ಮಾನ್ಯತೆ ದೊರೆತ ಬಳಿಕ 2015ರಲ್ಲಿ ತೆರೇಸಾರಿಗೆ ಸಂತ ಪದವಿ ನೀಡುವುದಾಗಿ ಪೆÇೀಪ್ ಘೋಷಿಸಿದ್ದರು.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!