Monday , January 22 2018
Home / Sandalwood / ಕಾವೇರಿಗಾಗಿ ಒಂದಾದ ಚಿತ್ರರಂಗ : ಸೆಪ್ಟೆಂಬರ್ 9ಕ್ಕೆ ಚಿತ್ರೋದ್ಯಮ ಬಂದ್
Buy Bitcoin at CEX.IO

ಕಾವೇರಿಗಾಗಿ ಒಂದಾದ ಚಿತ್ರರಂಗ : ಸೆಪ್ಟೆಂಬರ್ 9ಕ್ಕೆ ಚಿತ್ರೋದ್ಯಮ ಬಂದ್

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ತೀರ್ಪಿಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಪ್ರತಿಭಟನೆಯೂ ನಡೆಯುತ್ತಿದೆ. ರೈತರ ಈ ಹೋರಾಟ ಚಿತ್ರೋದ್ಯಮವೂ ಬೆಂಬಲ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 9 ರಂದು ಚಿತ್ರರಂಗ ಬಂದ್ ಮಾಡಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ… ಅಲ್ಲದೆ, ಈ ಪ್ರತಿಭಟನೆಗೆ ಎಲ್ಲಾ ನಟರು ಪ್ರತಿಭಟನೆಗೆ ಬೆಂಬಲ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಥಿಯೇಟರ್ಗೆ ದಾಳಿ : ಇನ್ನೊಂದ್ಕಡೆ, ಇವತ್ತು ತಮಿಳು ಚಿತ್ರಪ್ರದರ್ಶನ ಮಾಡುತ್ತಿದ್ದ ಎರಡು ಚಿತ್ರ ಮಂದಿರ ಮೇಲೆ ಕರವೇ ಕಾರ್ಯಕರ್ತರು ದಾಳಿ ಮಾಡಿದ ಘಟನೆಯೂ ನಡೆದಿದೆ. ಶೇಷಾದ್ರಿಪುರದ ನಟರಾಜ ಚಿತ್ರ ಮಂದಿರ ಮತ್ತು ಆರ್.ಟಿ.ನಗರ ಸಮೀಪದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ತಮಿಳು ಚಿತ್ರಕ್ಕೆ ಅಡ್ಡಿ ಮಾಡಲಾಯಿತು. ಬಾಕಿ ಉಳಿದಂತೆ ಕೆಲವು ಚಿತ್ರಮಂದಿರಗಳು ಇವತ್ತು ತಮಿಳು ಚಿತ್ರ ಪ್ರದರ್ಶನವನ್ನು ಸ್ವತಃ ನಿಲ್ಲಿಸಿದ್ದವು.

ತಾರಾ ಗರಂ : ಇನ್ನು, ನಮಗೇ ಕುಡಿಯಲು ನೀರಿಲ್ಲ. ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು ಎಂದು ನಟಿ ತಾರಾ ಹೇಳಿದ್ದಾರೆ. ಗೋಲಿಸೋಡ ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಅವರು, ಮಹದಾಯಿ ಮತ್ತು ಕಾವೇರಿ ಎರಡು ವಿಷಯದಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!