Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಅಕ್ಟೋಬರ್‍ಗೆ `ಪಿಲಿಬೈಲ್ ಯಮುನಕ್ಕ’ ರಿಲೀಸ್

ಅಕ್ಟೋಬರ್‍ಗೆ `ಪಿಲಿಬೈಲ್ ಯಮುನಕ್ಕ’ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ಪಿಲಿಬೈಲು ಯಮುನಕ್ಕ’ ಚಿತ್ರ ರಿಲೀಸ್‍ಗೆ ಸಜ್ಜಾಗಿದೆ… ಅಕ್ಟೋಬರ್ ಮೊದಲವಾರದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ… ಹಲವು ಪ್ರಯೋಗಗಳಿಗೆ ಕಾರಣವಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್, ಅಮನ್ ತ್ರಿಶಾ, ನಕಾಶ್ ಅಜೀಜ್, ಪ್ರಕಾಶ್ ಮಹಾದೇವನ್ ಹಾಡಿದ್ದಾರೆ. ಇನ್ನು, ತೆಂಕುತಿಟ್ಟು ಯಕ್ಷಗಾನಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಹಾಡು ಹಾಡಿದ್ದು ಈ ಹಾಡು ಈಗಾಗಲೇ ಹಿಟ್ ಆಗಿದೆ…

pilibail-yamunakkaಇನ್ನು, ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಚಂದ್ರಕಲಾ ಮೋಹನ್ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಮುನಕ್ಕನ ಪಾತ್ರದಲ್ಲಿ ಚಂದ್ರಕಲಾ ಕಾಣಿಸಿಕೊಂಡಿದ್ದಾರೆ. ಭಾಷೆಯ ಕಾರಣಕ್ಕೆ ಭಯದಿಂದಲೇ ಒಪ್ಪಿಕೊಂಡಿದ್ದ ಚಂದ್ರಕಲಾ ಈಗ ತುಳುನಾಡನ್ನು ತುಂಬಾ ಇಷ್ಟಪಡುತ್ತಿದ್ದಾರೆ. ನೀರುದೋಸೆ ಮತ್ತು ಮೀನುಸಾರು ಚಂದ್ರಕಲಾರನ್ನು ಬಹುವಾಗಿ ಸೆಳೆದಿದೆಯಂತೆ.

ಲಕುಮಿ ಕ್ರಿಯೇಶನ್ ಹಾಗೂ ಶ್ರೀ ದುರ್ಗಾ ಎಂಟರ್ ಟೈನ್‍ಮೆಂಟ್‍ನ ಎಕ್ಕಸಕ ಖ್ಯಾತಿಯ ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ನಾಯಕರಾಗಿ ನಾಗರಾಜ್ ಅಂಬರ್, ನಾಯಕಿಯಾಗಿ ಸೋನಾಲಿ ಮೊಂತೇರೊ, ನವೀನ್.ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ದೀಪಕ್ ರೈ, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ರೂಪ ವರ್ಕಾಡಿ, ನಮಿತಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರೋಹನ್ ಶೆಟ್ಟಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!