Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಕರ್ನಾಟಕ ಬಂದ್ : ನಟಿ ಮೇಘನಾರಾಜ್ ಕಾರಿನ ಮೇಲೆ ದಾಳಿ

ಕರ್ನಾಟಕ ಬಂದ್ : ನಟಿ ಮೇಘನಾರಾಜ್ ಕಾರಿನ ಮೇಲೆ ದಾಳಿ

ಬೆಂಗಳೂರು : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದನ್ನು ಖಂಡಿಸಿ ಕರೆಯಲಾಗಿದ್ದ ಕರ್ನಾಟಕ ಬಂದ್ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಕಾರಿನ ಮೇಲೆ ದಾಳಿ ನಡೆದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಮೇಘನಾ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ನೈಸ್‍ರೋಡ್ ಜಂಕ್ಷನ್ ಬಳಿ ತಲುಪಿದಾಗ ಮೇಘನಾ ಕಾರಿನ್ನು ಗುಂಪೊಂದು ಅಡ್ಡಗಟ್ಟಿತ್ತು. ಅಲ್ಲದೆ, ಕಾರಿನಿಂದ ಇಳಿಯುವಂತೆ ಒತ್ತಾಯ ಮಾಡಿತ್ತು. ಕಾರಿನಲ್ಲಿ ಮೇಘನಾ ಇದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಗುಂಪಿನ ಗಲಾಟೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ, ಕಾರನ್ನು ಲಾಕ್ ಮಾಡಿಕೊಂಡು ಮೇಘನಾ ಕಾರಿನಲ್ಲಿ ಕುಳಿತಿದ್ದರು. ಬಳಿಕ ಮೇಘನಾ ಸಿಬ್ಬಂದಿ ಮತ್ತು ಚಾಲಕ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಆದÀರೆ, ಸುಮಾರು 15 ನಿಮಿಷಗಳಷ್ಟು ಕಾಲ ಇಲ್ಲಿ ಆತಂಕದ ವಾತಾಔರಣ ನಿರ್ಮಾಣ ಆಗಿತ್ತು. ಮೇಘನಾ ಕೂಡಾ ಹೆದರಿದ್ದರು. ಈ ಗಲಾಟೆಯಲ್ಲಿ ಮೇಘನಾ ಕಾರಿಗೆ ಒಂದಷ್ಟು ಹಾನಿಯಾಗಿದೆ… ಮೇಘನಾ ಪ್ರಕಾರ ಈ ಗುಂಪಿನಲ್ಲಿದ್ದ ಕೆಲವರು ಕುಡಿದಿದ್ದರಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!