Friday , September 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಡಿಸೆಂಬರ್ 9ಕ್ಕೆ ನಾಗಾರ್ಜುನರ ಎರಡನೇ ಪುತ್ರನ ನಿಶ್ಚಿತಾರ್ಥ

ಡಿಸೆಂಬರ್ 9ಕ್ಕೆ ನಾಗಾರ್ಜುನರ ಎರಡನೇ ಪುತ್ರನ ನಿಶ್ಚಿತಾರ್ಥ

ಹೈದರಾಬಾದ್ : ತೆಲುಗು ಸೂಪರ್‍ಸ್ಟಾರ್ ನಾಗಾರ್ಜುನ ಎರಡನೇ ಪುತ್ರ ಅಖಿಲ್ ಅಕಿನೇನಿ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ… ಅಖಿಲ್ ನಿಶ್ಚಿತಾರ್ಥ ಡಿಸೆಂಬರ್ 9ಕ್ಕೆ ನಡೆಯಲಿದೆ. ಡಿಸೈನರ್ ಶ್ರೇಯಾ ಭೂಪಾಲ್ ಜೊತೆ ಅಖಿಲ್ ನಿಶ್ಚಿತಾರ್ಥ ನಡೆಯಲಿದೆ. ಹೈದರಾಬಾದ್‍ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಗೊತ್ತಾಗಿದೆ. ನಿಶ್ಚಿತಾರ್ಥದ ದಿನ ಈಗ ನಿಗದಿಯಾಗಿದ್ದು, ಮುಂದಿನ ವರ್ಷ ಮದುವೆ ನಡೆಯಲಿದೆ. ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕಳೆದ ಹಲವು ವರ್ಷಗಳಿಂದ ಪ್ರೇಮಲೋಕದಲ್ಲಿ ವಿಹರಿಸುತ್ತಿರುವ ಶ್ರೇಯಾ ಮತ್ತು ಅಖಿಲ್ ಅವರ ಪ್ರೀತಿಗೆ ಎರಡೂ ಕುಟುಂಬಸ್ಥರು ಸಮ್ಮತಿಯ ಮುದ್ರೆಯೊತ್ತಿದ್ದಾರೆ.

ಇನ್ನು, ನಾಗಾರ್ಜುನರ ಮೊದಲ ಪುತ್ರ ನಾಗಚೈತನ್ಯ ಕೂಡಾ ಮದುವೆ ಸಿದ್ಧತೆಯಲ್ಲಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದು, ಇವರಿಬ್ಬರ ಮದುವೆ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!