Thursday , November 15 2018
ಕೇಳ್ರಪ್ಪೋ ಕೇಳಿ
Home / News NOW / ನಾಳೆ ಕರ್ನಾಟಕ ಬಂದ್ ಇಲ್ಲ : ನಾಡಿದ್ದು ರೈಲ್ ರೋಖೋಗೆ ವಾಟಾಳ್ ಕರೆ

ನಾಳೆ ಕರ್ನಾಟಕ ಬಂದ್ ಇಲ್ಲ : ನಾಡಿದ್ದು ರೈಲ್ ರೋಖೋಗೆ ವಾಟಾಳ್ ಕರೆ

ಬೆಂಗಳೂರು : ಕಾವೇರಿ ವಿವಾದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್ ಎಂಬ ಸುದ್ದಿ ಹಬ್ಬುತ್ತಿದೆ. ಆದರೆ, ವಾಸ್ತವವಾಗಿ ನಾಳೆ ಕರ್ನಾಟಕ ಬಂದ್ ಇಲ್ಲ. ಹೀಗಾಗಿ, ಜನ ನಿರಾಳರಾಗಿ ಇರಬಹುದು. ಬೆಂಗಳೂರು ಕೂಡಾ ಈಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಪೊಲೀಸರು ಕೂಡಾ ಭದ್ರತೆಯ ಅಭಯ ನೀಡಿದ್ದಾರೆ. ಇವತ್ತು ಯಾವುದೇ ಅಹಿತಕರ ಘಟನೆ ಆಗದಂತೆ ರಾಜ್ಯ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. bundh
ರೈಲ್ ರೋಖೋ : ಇನ್ನು, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನಾಡಿದ್ದು ಅಂದರೆ 15ನೇ ತಾರೀಕು ರಾಜ್ಯಾದ್ಯಂತ ರೈಲ್ ರೋಖೋಗೆ ಕರೆ ನೀಡಿದ್ದಾರೆ. ಕಾವೇರಿ ವಿವಾದದ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ವಾಟಾಳ್ ಈ ಕರೆ ನೀಡಿದ್ದಾರೆ. ಜೊತೆಗೆ, ಇದೇ ತಿಂಗಳ 19ರಂದು ಕರ್ನಾಟಕದ ಗಡಿಭಾಗ ಅತ್ತಿಬೆಲೆಯಲ್ಲಿ ಹೋರಾಟಾ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.. ಅಲ್ಲದೆ, ಈ ವಿಚಾರವಾಗಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!