Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ಅಮಿತಾಭ್ ಬಚ್ಚನ್‍ಗೆ ಕಾಡುತ್ತಿದೆ ಅಪರಾಧಿ ಪ್ರಜ್ಞೆ…!

ಅಮಿತಾಭ್ ಬಚ್ಚನ್‍ಗೆ ಕಾಡುತ್ತಿದೆ ಅಪರಾಧಿ ಪ್ರಜ್ಞೆ…!

ಮುಂಬೈ : ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಈ ಅಪರಾಧಿ ಪ್ರಜ್ಞೆ ಕಾಡಲಾರಂಭಿಸಿದೆ. ರಾಜಕಾರಣಿಯಾಗಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಲಿಲ್ಲ ಎಂದು ಅಮಿತಾಭ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾನು ಪ್ರತಿನಿಧಿಸುತ್ತಿದ್ದ ಅಲಹಾಬಾದ್ ಕ್ಷೇತ್ರದ ಜನರಿಗೆ ನೀಡಿದ ಭರವಸೆ ಈಡೇರಿಸಲಾಗದೇ ಇರುವುದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.

73 ವರ್ಷದ ಈ ಮೆಗಾಸ್ಟಾರ್ 1984ರಲ್ಲಿ ನಟನಾಕ್ಷೇತ್ರಕ್ಕೆ ಬ್ರೇಕ್ ನೀಡಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ತನ್ನ ಬಹುಕಾಲದ ಗೆಳೆಯ ರಾಜೀವ್ ಗಾಂಧಿಗೆ ಬೆಂಬಲ ನೀಡಿ ಅಮಿತಾಭ್ ರಾಜಕೀಯ ಪ್ರವೇಶ ಮಾಡಿದ್ದರು. ಬಳಿಕ ಅಲಹಾಬಾದ್‍ನಿಂದ ಸ್ಪರ್ಧಿಸಿ ಬಹುಮತದಿಂದ ಅಮಿತಾಭ್ ಗೆಲುವು ಸಾಧಿಸಿದ್ದರು. ಆದರೆ, ಜಾಸ್ತಿ ಸಮಯ ರಾಜಕೀಯದಲ್ಲಿ ಇರದ ಅಮಿತಾಭ್ ಮೂರೇ ವರ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು. ಈ ಸಂದರ್ಭವನ್ನು ನೆನಪಿಸಿಕೊಂಡ ಬಚ್ಚನ್, ಈ ಸಂದರ್ಭದಲ್ಲಿ ನೀಡಿದ್ದ ಕೆಲವೊಂದು ಭರವಸೆಗಳನ್ನು ನಾನು ಈಡೇರಿಸಿಲ್ಲ. ಈ ಬಗ್ಗೆ ಜನರು ನೊಂದದಿದ್ದರೆ ನಾನು ವಿಷಾಧಿಸುತ್ತೇನೆ ಎಂದು ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!