Monday , February 19 2018
Home / News NOW / ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಿಐಡಿ ಕಸ್ಟಡಿಗೆ ನಿರಂಜನ್ ಭಟ್
Buy Bitcoin at CEX.IO

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಿಐಡಿ ಕಸ್ಟಡಿಗೆ ನಿರಂಜನ್ ಭಟ್

ಉಡುಪಿ : ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‍ನನ್ನು ಎರಡು ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಿನ್ನೆ ನಿರಂಜನ್ ಭಟ್‍ನನ್ನು ಸಿಐಡಿ ವಶಕ್ಕೆ ನೀಡಿ ಆದೇಶ ನೀಡಿದೆ.

bhaskar shetty case (1)ಪೊಲೀಸರಿಂದ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಬಳಿಕ ಸಿಐಡಿ ಈ ರೀತಿಯ ಅಚ್ಚರಿಯ ನಡೆ ಪ್ರದರ್ಶಿಸಿದೆ. ಇದೇ ಮೊದಲ ಬಾರಿಗೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನ್ನನ್ನು ಸಿಐಡಿ ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಸದ್ಯ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಸೆಪ್ಟೆಂಬರ್ 19ರಂದು ಈ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇದರ ನಡುವೆ, ನಿರಂಜನ್ ಭಟ್‍ನನ್ನು ಸಿಐಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ಕೋರ್ಟ್ ಕೂಡಾ ಸಿಐಡಿ ಮನವಿಯನ್ನು ಪುರಸ್ಕರಿಸಿದೆ.

bhaskar shetty case (2)ಸಾಕ್ಷನಾಶದ ಆರೋಪದಲ್ಲಿ ಬಂಧಿತರಾಗಿರುವ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಮತ್ತು ಕಾರು ಚಾಲಕ ರಾಘವೇಂದ್ರ ಹಿರಿಯಡ್ಕ ಜೈಲಿನಲ್ಲಿದ್ದರೆ, ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಮತ್ತು ನಿರಂಜನ್ ಭಟ್‍ರನ್ನು ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲಾಗಿದೆ.

CEX.IO Bitcoin Exchange

About sudina

Check Also

ಯುಎಇ ಎಕ್ಸ್ ಚೇಂಜ್‍ನಲ್ಲಿ ಗ್ರಾಹಕರ ಸಮಾಗಮ…

ಮಂಗಳೂರು : ಸಾರ್ವಜನಿಕ ಸೇವೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಯುಇಎ  ಎಕ್ಸ್ ಚೇಂಜ್‍ನ ಕಂಕನಾಡಿ ಬ್ರ್ಯಾಂಚ್‍ನಲ್ಲಿ ವಾರ್ಷಿಕ ಗ್ರಾಹಕರ ಸಮಾವೇಶ …

Leave a Reply

Your email address will not be published. Required fields are marked *

error: Content is protected !!