Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / Kollywood / ರಜನಿಕಾಂತ್ ಮಗಳ ಬಾಳಲ್ಲಿ ಬಿರುಗಾಳಿ…? : ವಿಚ್ಚೇದನಕ್ಕೆ ಅರ್ಜಿ…?

ರಜನಿಕಾಂತ್ ಮಗಳ ಬಾಳಲ್ಲಿ ಬಿರುಗಾಳಿ…? : ವಿಚ್ಚೇದನಕ್ಕೆ ಅರ್ಜಿ…?

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ಬಾಳಲ್ಲಿ ಬಿರುಗಾಳಿಯ ಅಲೆ ಎದ್ದಿದೆ. ಒಂದು ಮೂಲಗಳ ಪ್ರಕಾರ ಸೌಂದರ್ಯ ಶೀಘ್ರ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಆರು ವರ್ಷದ ಹಿಂದೆ ಸೌಂದರ್ಯ ಚೆನ್ನೈ ಮೂಲದ ಉದ್ಯಮಿ ಅಶ್ವಿನ್ ಎಂಬುವವರನ್ನು ಮದುವೆಯಾಗಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಈ ದಂಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರಂತೆ. ಈ ದಂಪತಿ ದೂರವಾಗುತ್ತಿರುವುದಕ್ಕೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದರೆ, ಎರಡು ವರ್ಷಗಳ ಹಿಂದಿನಿಂದ ಈ ದಂಪತಿ ಸಂಬಂಧ ಹಳಸಿದ್ದು ಇಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಚೇಧನದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗೊತ್ತಾಗಿದೆ. ಮಗಳ ದಾಂಪತ್ಯವನ್ನು ಉಳಿಸಿಕೊಳ್ಳಲು ರಜನಿಕಾಂತ್ ಅವರು ಕೂಡಾ ಸಾಕಷ್ಟು ಪ್ರಯತ್ನ ಮಾಡಿದ್ದರು. ಅಶ್ವಿನ್ ಜೊತೆಗಿನ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳುವಂತೆ ರಜನಿ ಮಗಳಿಗೆ ಸಲಹೆ ನೀಡಿದ್ದರು. ಆದರೆ, ಇದು ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!