Tuesday , December 12 2017
Home / Bollywood / ಪತ್ರಕರ್ತರಿಗೆ ರಿಶಿ ಕಪೂರ್ ಹಲ್ಲೆ…? : ಇಲ್ಲಿದೆ ವೀಡಿಯೋ

ಪತ್ರಕರ್ತರಿಗೆ ರಿಶಿ ಕಪೂರ್ ಹಲ್ಲೆ…? : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟರಾದ ರಿಶಿ ಕಪೂರ್ ಮತ್ತು ರಣದೀರ್ ಕಪೂರ್ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯ ಆನ್‍ಲೈನ್‍ನಲ್ಲಿ ಹರಿದಾಡುತ್ತಿದೆ. ಪತ್ರಕರ್ತ ಸೌಂಡ್ ಬೈಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಸಹೋದರರು ಹಲ್ಲೆ ಮಾಡಿದ್ದಾರೆ ಎಂದು ದೂರವಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಬರುವಾಗ ರಿಶ್ ಯುವಕನನ್ನು ತಳ್ಳುವ ದೃಶ್ಯ ಸೆರೆ ಆಗಿದೆ. ಆದರೆ, ಈ ವ್ಯಕ್ತಿ ಪತ್ರಕರ್ತನಾ ಅಥವಾ ಅಭಿಮಾನಿಯಾ ಎಂಬುದು ಇನ್ನೂ ಗೊತ್ತಾಗಿಲ್ಲ.

ಚೆಂಬೂರ್ ಬಳಿ ಇರುವ ಆರ್.ಕೆ.ಸ್ಟುಡಿಯೋದಲ್ಲಿ ರಾಜ್‍ಕಪೂರ್ ಕುಟುಂಬಸ್ಥರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದರು. ಈ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಸಾಕಷ್ಟು ಜನ ಸೇರಿದ್ದರು. ದಾದರ್‍ನ ಶಿವಾಜಿ ಪಾರ್ಕ್ ಸನಿಹದಲ್ಲಿರುವ ಸಮುದ್ರದಲ್ಲಿ ಈ ಗಣೇಶ ಮೂರ್ತಿ ವಿಸರ್ಜನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ನೂಕಾಟ ತಳ್ಳಾಟ ನಡೆದಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!