Wednesday , January 24 2018
Home / News NOW / ಅಭಿವೃದ್ಧಿ ಪಥದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ
Buy Bitcoin at CEX.IO

ಅಭಿವೃದ್ಧಿ ಪಥದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ

ಬಂಟ್ವಾಳ: ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸಕಲ ಮೂಲಭೂತ ವ್ಯವಸ್ಥೆಗಳೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅವರು ತಿಳಿಸಿದ್ದಾರೆ.
ಶನಿವಾರ ಸಂಜೆ ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರ ಸಹಕಾರ ಹಾಗೂ ಸಚಿವ ರಮಾನಾಥ ರೈ ಸೇರಿದಂತೆ ಇತರ ಜನಪ್ರತಿನಿಧಿಗಳ ಅನುದಾನಗಳ ನೆರವಿನಿಂದ ನಿರೀಕ್ಷೆಗೂ ಮೀರಿ ಸಂಸ್ಥೆಯು ಬೆಳೆದು ನಿಂತಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜೊತೆಗೆ ಈ ಶಾಲೆಯ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಅಭೂತಪೂರ್ವವಾದ ಸಾಧನೆಯನ್ನು ಮಾಡಿರುವುದು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಸತಿ ನಿಲಯ ನಿರ್ಮಾಣಕ್ಕೆ ಪ್ರಸ್ತಾವಣೆ: ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಪಕ್ಕದಲ್ಲೇ ವಸತಿ ನಿಲಯ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಚಿವ ರಮಾನಾಥ ರೈ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧವಾಗಿ ಪ್ರಕ್ರಿಯೆಗಳು ನಡೆಯುತ್ತಿದೆ ಎಂದ ಅವರು, ಬಿ.ಸಿ.ರೋಡಿನಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನರಿಕೊಂಬು, ಶಂಭೂರು, ಬಿಯಾಪಾದೆ ಮೂಲಕ ಮಾಣಿಗೆ ಸರಕಾರಿ ಬಸ್‍ನ ವ್ಯವಸ್ಥೆಯು ಶೀಘ್ರವೇ ಆರಂಭವಾಗಲಿದೆ ಎಂದರು. ಶಾಲೆಯಲ್ಲಿ ಕೋಟಿ ವೃಕ್ಷ ಆಂದೋಲನವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗೆ ಎರಡೆರಡು ಗಿಡಗಳನ್ನು ವಿತರಿಸಿ ಅವುಗಳ ಪೋಷಣೆಯ ಜವಾಬ್ದಾರಿ ನೀಡಲಾಗಿದ್ದು ಅದನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಕರಾದ ಕಮಲಾಕ್ಷ, ಪ್ರಕಾಶ್ ಎಂ., ಚಿನ್ನಪ್ಪ ಗೌಡ, ಸದಾಶಿವ ನಾಯಕ್, ಹರಿಪ್ರಸಾದ್, ಸುಶೀಲಾ, ವರಮಹಾಲಕ್ಷ್ಮಿ, ಭಾರತಿ ಮೊದಲಾದವರು ಉಪಸ್ಥಿತರಿದ್ದರು.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!