Wednesday , August 15 2018
ಕೇಳ್ರಪ್ಪೋ ಕೇಳಿ
Home / News NOW / ಸಿಕ್ಕಿದ್ದು ಭಾಸ್ಕರ್ ಶೆಟ್ಟಿ ಅವರ ಮೂಳೆನಾ…?

ಸಿಕ್ಕಿದ್ದು ಭಾಸ್ಕರ್ ಶೆಟ್ಟಿ ಅವರ ಮೂಳೆನಾ…?

ಉಡುಪಿ : ಬಹುಕೋಟಿ ಆಸ್ತಿಯ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಪೂರಕವಾದ ಮತ್ತೊಂದು ಸಾಕ್ಷಿ ಲಭ್ಯವಾಗಿದೆ. ಉಡುಪಿ ಪೊಲೀಸರ ತನಿಖೆ ವೇಳೆ ಸಿಕ್ಕ ಮೂಳೆ ಮನುಷ್ಯರದ್ದೇ ಎಂಬುದು ದೃಢಪಟ್ಟಿದೆ. ಎಫ್‍ಎಸ್‍ಎಲ್ ವರದಿಯಿಂದ ಇದು ದೃಢಪಟ್ಟಿದ್ದು, ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಇನ್ನೊಂದು ಆಯಾಮ ಸಿಕ್ಕಿದೆ.

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆಯೇ ಪೊಲೀಸರು ಅವಶೇಷಗಳಿಗಾಗಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಮೂಳೆಯೊಂದು ಪತ್ತೆಯಾಗಿತ್ತು. ಆದರೆ, ಈ ಮೂಳೆ ಮನುಷ್ಯರದ್ದೆನೇ ಅಥವಾ ಪ್ರಾಣಿಯದ್ದಾ ಎಂಬ ಸಂಶಯವೂ ಇತ್ತು. ಹೀಗಾಗಿ, ಮೂಳೆಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು ಈ ಮೂಳೆ ಮನುಷ್ಯರದ್ದೇ ಎಂದು ಗೊತ್ತಾಗಿದೆ. ಆದರೆ, ಇದು ಭಾಸ್ಕರ ಶೆಟ್ಟಿ ಅವರ ಮೂಳೆಯೇನಾ ಎಂಬುದು ಇನ್ನೂ ಗೊತ್ತಾಗಿಲ್ಲ. ಇದು ಗೊತ್ತಾಗಬೇಕಾದರೆ ಇನ್ನೂ ಒಂದು ಹತ್ತು ದಿನ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಸಂಬಂಧ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಮಗ ನವನೀತ್, ಜ್ಯೋತಿಷಿ ನಿರಂಜನ್ ಭಟ್ ಮತ್ತು ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಲ್ಲಿ ನಿರಂಜನ್ ಭಟ್‍ನನ್ನು ಸಿಐಡಿ ಎರಡು ದಿನಗಳ ಕಾಲ ವಶಕ್ಕೆ ಪಡೆದಿದೆ. ಮೊನ್ನೆ ಸಿಐಡಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಿರಂಜನ್ ಭಟ್‍ನನ್ನು ಸಿಐಡಿ ವಶಕ್ಕೆ ನೀಡಿದೆ.

bhaskar shetty case (5)ಪಳ್ಳಿ ನದಿ ಬಳಿ ಪರಿಶೀಲನೆ : ಇತ್ತ, ಸಿಕ್ಕಿರುವ ಮೂಳೆ ಮನುಷ್ಯರದ್ದೇ ಎಂದು ಗೊತ್ತಾಗುತ್ತಿದ್ದಂತೆಯೇ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಸಿಐಡಿ ವಶದಲ್ಲಿರುವ ಪ್ರಮುಖ ಆರೋಪಿ ನಿರಂಜನ್ ಭಟ್‍ನನ್ನು ಸಿಐಡಿ ಅಧಿಕಾರಿಗಳು ಪಳ್ಳಿ ನದಿ ದಡಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ. ನಂದಳಿಕೆ ಗ್ರಾಮದ ಬಳಿ ಇರುವ ಪಳ್ಳಿ ನದಿಗೆ ಭಾಸ್ಕರ್ ಶೆಟ್ಟಿ ಮೃತದೇಹದ ಅವಶೇಷಗಳನ್ನು ಎಸೆಯಲಾಗಿತ್ತು ಎಂದು ಮೊದಲು ಸುದ್ದಿಯಾಗಿತ್ತು. ನಿರಂಜನ್ ಭಟ್ ಮನೆಯ ಹೋಮಕುಂಡದಲ್ಲಿ ಹೆಣ ಸುಟ್ಟ ಬಳಿಕ ಅವಶೇಷಗಳನ್ನು ನದಿಗೆ ಎಸೆಯಲಾಗಿತ್ತು ಎಂದು ಹೇಳಲಾಗಿತ್ತು. ಹೀಗಾಗಿ, ಪಳ್ಳಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ನಿರಂಜನ್ ಭಟ್ ಎರಡು ದಿನ ಸಿಐಡಿ ವಶದಲ್ಲಿದ್ದಾನೆ…

About sudina

Check Also

ಮೈಸೂರು ಹಾಸ್ಟೆಲ್‍ಗೆ ನುಗ್ಗಿ ಕಾಟ : ಬಂಟ್ವಾಳದಲ್ಲಿ ಆರೋಪಿ ಬಂಧನ

ಮಂಗಳೂರು : ಜುಲೈ 20 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ …

Leave a Reply

Your email address will not be published. Required fields are marked *

error: Content is protected !!