Monday , February 18 2019
ಕೇಳ್ರಪ್ಪೋ ಕೇಳಿ
Home / Film News / Tollywood / ಮುಂದಿನ ವರ್ಷ ಸಮಂತಾ ನಾಗಚೈತನ್ಯ ವಿವಾಹ

ಮುಂದಿನ ವರ್ಷ ಸಮಂತಾ ನಾಗಚೈತನ್ಯ ವಿವಾಹ

ಹೈದರಾಬಾದ್ : ಟಾಲಿವುಡ್‍ನ ನಾಗಚೈತನ್ಯ ಮತ್ತು ಸಮಂತಾ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂಬುದು ಹಳೆಯ ಸುದ್ದಿ… ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬದವರ ಸಮ್ಮತಿಯ ಮುದ್ರೆಯೂ ಬಿದ್ದಿದೆ… ಹೀಗಾಗಿ, ಶೀಘ್ರ ದಾಂಪತ್ಯಕ್ಕೆ ಕಾಲಿಡುವುದಕ್ಕೆ ಈ ಜೋಡಿ ನಿರ್ಧರಿಸಿದೆ. ಒಂದು ಮೂಲಗಳ ಪ್ರಕಾರ ಮುಂದಿನ ವರ್ಷ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯಕ್ಕೆ ಕಾಲಿಡಲಿದ್ದಾರೆ… ಸ್ವತಃ ನಾಗಚೈತನ್ಯ ಅವರೇ ಈ ವಿಷಯ ತಿಳಿಸಿದ್ದಾರೆ. ಮದುವೆ ದಿನಾಂಕದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ ನಾಗಚೈತನ್ಯ, ಮುಂದಿನ ವರ್ಷ ನಮ್ಮಿಬ್ಬರ ಮದುವೆ ನಡೆಯಲಿದೆ. ನನ್ನ ತಂದೆ ನಾಗಾರ್ಜುನ ವಿವಾಹದ ದಿನಾಂಕವನ್ನು ಘೋಷಿಸಲಿದ್ದಾರೆ. ಸದ್ಯ, ಇದಕ್ಕಿಂತ ಹೆಚ್ಚಿನ ಮಾಹಿತಿ ಏನೂ ಇಲ್ಲ ಎಂದು ಹೇಳಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!