Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಏನ್ ಕಾಲ ಬಂತಪ್ಪಾ…? 90 ವರ್ಷದ ಕ್ಯಾನ್ಸರ್ ಪೀಡಿತೆಯ ಅತ್ಯಾಚಾರ…!

ಏನ್ ಕಾಲ ಬಂತಪ್ಪಾ…? 90 ವರ್ಷದ ಕ್ಯಾನ್ಸರ್ ಪೀಡಿತೆಯ ಅತ್ಯಾಚಾರ…!

ತಿರುವನಂತಪುರ : ಇದೊಂದು ಶಾಕಿಂಗ್ ಸುದ್ದಿ. ಕೇರಳದಲ್ಲಿ 90 ವರ್ಷದ ಅಜ್ಜಿಯನ್ನು ಕಾಮಾಂಧನೊಬ್ಬ ಅತ್ಯಾಚಾರ ಮಾಡಿದ್ದಾನೆ…! ಕ್ಯಾನ್ಸರ್ ಪೀಡಿತೆಯ ಮನೆಗೆ ನುಗ್ಗಿ ಕಾಮುಕನೊಬ್ಬರ ಈ ಕೃತ್ಯವೆಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 14ರಂದು ಈ ಘಟನೆ ನಡೆದಿದೆ.

ದಕ್ಷಿಣ ಕೇರಳದ ಕೊಲ್ಲಂ ಬಳಿ ಕಡಕ್ಕಲ್‍ನಲ್ಲಿ ಈ ಘಟನೆ ನಡೆದಿದೆ. ಗಂಡ ತೀರಿಕೊಂಡ ಬಳಿಕ ಈ ವೃದ್ಧೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು. ಇವರಿಗೆ ಮಕ್ಕಳು ಕೂಡಾ ಇರಲಿಲ್ಲ.

ಇನ್ನು, ಈ ಘಟನೆ ಬೆಳಕಿಗೆ ಬಂದ ಬಳಿಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೆ, ಒಂದು ವರಾದೊಳಗೆ ವರದಿ ನೀಡುವಂತೆ ಆದೇಶ ನೀಡಿದೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿ ವೃದ್ಧೆಯ ಮನೆಯ ಬಾಗಿಲು ಮುರಿದು ರಾತ್ರಿ ಪ್ರವೇಶ ಮಾಡಿದ್ದ. ಅಲ್ಲದೆ, ಮಹಿಳೆಗೆ ಚಾಕು ತೋರಿಸಿ ಹಲ್ಲೆ ಮಾಡಿದ್ದ. ಇದರಿಂದ ವೃದ್ಧೆಗೆ ಗಾಯ ಕೂಡಾ ಆಗಿದೆ. ಮರುದಿನ ಸಂಬಂಧಿಕರು ಮತ್ತು ನೆರೆಮನೆಯವರಿಗೆ ವೃದ್ಧೆ ಈ ವಿಷಯ ತಿಳಿಸಿದ್ದಾರೆ. ಆದರೆ, ಅವರು ಈ ವಿಷಯ ಬಹಿರಂಗ ಮಾಡದಂತೆ ಸಂತ್ರಸ್ತ ಅಜ್ಜಿಗೆ ತಾಕೀತು ಮಾಡಿದ್ದರು…! ಈ ಪ್ರದೇಶದ ಪಂಚಾಯತ್ ಸದಸ್ಯ ಕೂಡಾ ಇದೇ ರೀತಿ ಹೇಳಿದ್ದು, ಈ ಸಂತ್ರಸ್ತೆಯ ದೂರನ್ನು ಕೂಡಾ ನಿರ್ಲಕ್ಷ್ಯ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದಾದ ಬಳಿಕ ಈ ಪ್ರದೇಶದ ಸಾಮಾಜಿಕ ಕಾರ್ಯಕರ್ತರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು, ಈ ವೃದ್ಧೆಗೆ ಲೈಂಗಿಕವಾಗಿ ದೌರ್ಜನ್ಯ ಆಗಿರುವುದು ನಿಜ ಎಂದು ವೈದ್ಯರು ಕೂಡಾ ದೃಢಪಡಿಸಿದ್ದಾರೆ. ಈ ವೃದ್ಧೆ ಆರೋಪಿಯ ಹೆಸರನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!