Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ಗಾಯಕಿ ಎಸ್.ಜಾನಕಿ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ : ಎಸ್.ಬಿ.ಬಾಲಸುಬ್ರಹ್ಮಣ್ಯಂ ಗರಂ

ಗಾಯಕಿ ಎಸ್.ಜಾನಕಿ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ : ಎಸ್.ಬಿ.ಬಾಲಸುಬ್ರಹ್ಮಣ್ಯಂ ಗರಂ

ಬೆಂಗಳೂರು : ಗಾಯಕೋಗಿಲೆ ಎಸ್.ಜಾನಕಿ ತಾನಿನ್ನು ಹಾಡುವುದಿಲ್ಲ ಎಂದು ಹೇಳಿದ್ದ ವಿಚಾರವೇ ಇವತ್ತು ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಆತುರ ಆತುರವಾಗಿ ಪ್ರತಿಕ್ರಿಯೆ ನೀಡಿದ ಜನ ಸಾಮಾಜಿಕ ಜಾಲತಾಣಗಳಲ್ಲಿ ಜಾನಕಿ ಅವರು ವಿಧಿವಶರಾಗಿದ್ದಾರೆ ಎಂಬ ಅರ್ಥದಲ್ಲೇ ಪ್ರತಿಕ್ರಿಯೆಗಳನ್ನು ಹಾಕಿದ್ದರು. ಹೇಳಿ ಕೇಳಿ ಎಸ್.ಜಾನಕಿ ಜನಮಾನಸದಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ. ಹೀಗಾಗಿ, ಎಲ್ಲರೂ ಒಂದು ಕ್ಷಣ ಆತಂಕಕ್ಕೀಡಾಗಿದ್ದರು.

ವಾಸ್ತವವಾಗಿ ಎಸ್.ಜಾನಕಿ ಹಾಡನ್ನು ಮಾತ್ರ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ವಯೋ ಸಹಜವಾಗಿ ಅವರು ಇನ್ನು ವಿಶ್ರಾಂತಿ ಪಡೆದುಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ, ಇದೇ ತಪ್ಪಾಗಿ ಅರ್ಥೈಸಿ ಬೇರೆಯದ್ದೇ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಪ್ರಕಟವಾಗಿದ್ದಕ್ಕೆ ಎಸ್.ಜಾನಕಿ ಸೇರಿದಂತೆ ಹಲವರು ಬೇಸರಗೊಂಡಿದ್ದಾರೆ. ಖ್ಯಾತ ಗಾಯಕ ಎಸ್.ಬಿ.ಬಾಲಸುಬ್ರಹ್ಮಣ್ಯಂ ಫೇಸ್‍ಬುಕ್‍ನಲ್ಲಿ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸುಮ್ಮನೆ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. spb

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!