Tuesday , April 23 2019
ಕೇಳ್ರಪ್ಪೋ ಕೇಳಿ
Home / Gulf News / ಅರಬ್ ರಾಷ್ಟ್ರದಲ್ಲಿ ಅರಳಿದ ಕನ್ನಡ ಧ್ವಜ

ಅರಬ್ ರಾಷ್ಟ್ರದಲ್ಲಿ ಅರಳಿದ ಕನ್ನಡ ಧ್ವಜ

ಇರ್ಷಾದ್ ಮೂಡಬಿದಿರೆ
ಶಾರ್ಜಾ : ಅರಬ್ ರಾಷ್ಟ್ರದಲ್ಲಿ ಕನ್ನಡದ ಕಂಪು… ಮಧ್ಯಪ್ರಾಚ್ಯದಲ್ಲಿ ಅರಳಿದ ಕನ್ನಡದ ಧ್ವಜ… ಎಲ್ಲೆಲ್ಲೂ ಕರುನಾಡಿನ ಸೊಬಗಿನ ಅನುರಣನ…

ಶಾರ್ಜಾದ ಎಕ್ಸ್‍ಪೋ ಸೆಂಟರ್‍ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ ಈ ಸಭಾಂಗಣದಲ್ಲಿ ಇಷ್ಟು ದಿನ ಬೆಳಬಾಳುವ ಕೈಗಡಿಯಾರ, ಲಕ್ಷಾಂತರ ಪುಸ್ತಕ ಪ್ರದರ್ಶನ, ಫ್ಯಾಷನ್ ಶೋಗಳು ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಇಲ್ಲಿ ಕನ್ನಡದ ಕಂಪು ಪಸರಿಸಿದೆ. 2ನೇ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಈ ಸಭಾಂಗಣದಲ್ಲಿ ನಡೆದಿದೆ.

img-20160924-wa0179 img-20160924-wa0178 img-20160924-wa0171 img-20160924-wa0170 img-20160924-wa0136 img-20160924-wa0135 img-20160924-wa0134 img-20160924-wa0133 img-20160924-wa0132 img-20160924-wa0130 img-20160924-wa0131 img-20160924-wa0128 img-20160924-wa0127 img-20160924-wa0126 img-20160924-wa0129ಕಳೆದ ಮೂರು ದಶಕಗಳಿಂದ ಕನ್ನಡದ ಸೇವೆ ಮಾಡಿಕೊಂಡು ಬರುವ ಧ್ವನಿ ಪ್ರತಿಷ್ಠಾನ ತನ್ನ ಮೂವತ್ತನೆ ವರ್ಷಾಚರಣೆಯ ಸಲುವಾಗಿ 2ನೇ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಧ್ವನಿ ಶ್ರೀರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಶಾರ್ಜಾ ಎಕ್ಸ್ ಪೋ ರಾಯಲ್ ಕ್ರೌನ್ ಸಭಾಂಗಣದಲ್ಲಿ ಈ ಸಮ್ಮೇಳನ ನಡೆಯಿತು. ಸೆಪ್ಟೆಂಬರ್ 23ರ ಶುಕ್ರವಾರ ನಡೆದ ಈ ಸಮಾರಂಭಕ್ಕೆ ಸಾಕಷ್ಟು ಕನ್ನಡಿಗರು ಸಾಕ್ಷಿಯಾದರು.

img-20160924-wa0125 img-20160924-wa0122 img-20160924-wa0121 img-20160924-wa0119 img-20160924-wa0116 img-20160924-wa0115 img-20160924-wa0113 img-20160924-wa0111 img-20160924-wa0110 img-20160924-wa0109 img-20160924-wa0108 img-20160924-wa0107 img-20160924-wa0106 img-20160924-wa0104 img-20160924-wa0103ಡಾ.ಗೊ.ರು.ಚೆನ್ನಬಸಪ್ಪ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕವಿ ಜರಗನಹಳ್ಳಿ ಶಿವಶಂಕರ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ಪ್ರಜಾವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಪದ್ಮರಾಜ ದಂಡವತೆ ಮಾಧ್ಯಮ ಗೋಷ್ಠಿಯ ಅಧ್ಯಕ್ಷರಾಗಿದ್ದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ್ ಶೆಟ್ಟಿ ಅನಿವಾಸಿ ಅಂತರಾತ್ಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

img-20160924-wa0102 dubai-14 dubai-1 dubai-2 dubai-3 dubai-4 dubai-5 dubai-6 dubai-7 dubai-8 dubai-9 dubai-10 dubai-11 dubai-12 dubai-13 dubai-15 dubai-16 dubai dubai-4 ಧ್ವನಿ ಶ್ರೀರಂಗ ಪ್ರಶಸ್ತಿ : ಸಚಿವೆ ಉಮಾಶ್ರೀ ಅವರಿಗೆ ಈ ಬಾರಿಯ ಧ್ವನಿ ಶ್ರೀರಂಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಉಮಾಶ್ರೀ ಅವರ ಸಾಧನೆಯನ್ನು ಬಣ್ಣಿಸಿದರು. ಇನ್ನು, ಯುಎಇ ಎಕ್ಸ್‍ಚೇಂಜ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ಧ್ವನಿ ಅಂತಾರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಓಮನ್‍ನ ಉದ್ಯಮಿ ಶಶಿಧರ್ ಶೆಟ್ಟಿ, ಕತ್ತಾರ್ ತುಳುಕೂಟದ ಅಧ್ಯಕ್ಷ ಶ್ರೀರವಿಶೆಟ್ಟಿ, ಕುವೈಟ್ ಉದ್ಯಮಿ ಎಲಿಯಾಸ್ ಸಾಂಕಿಸ್ಟ್, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು, ಯುಎಇಯ ವಿವಿಧ ವಿಭಾಗದ ಗೋಪಿನಾಥ್ ರಾವ್, ಸುಧಾಕರ್ ಪೇಜಾವರ, ಬಿ.ಕೆ.ಗಣೇಶ್ ರೈ, ಇರ್ಷಾದ್ ಮೂಡಬಿದಿರೆ, ಅವನೀಶ್ ಭಟ್, ಪ್ರಕಾಶ್ ರಾವ್ ಪಯ್ಯಾರು, ರಾಬರ್ಟ್ ಉದ್ಯಾವರ, ಮನೋಹರ್ ತೋನ್ಸೆ, ವಿನಯಕುಮಾರ್ ನಾಯಕ್ ಮತ್ತು ಆರತಿ ಫಾಟಿಕರ್ ವಿವಿಧ ಗೋಷ್ಠಿಗಳಲ್ಲಿ ತಮ್ಮ ಪಾಂಡಿತ್ಯ ಮೆರೆದರು.

ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳನ್ನು ಸುಮಂಗಲೆಯರು ಪೂರ್ಣಕುಂಭ ಸ್ವಾಗತದಿಂದ ಸ್ವಾಗತಿಸಿದರು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ಪಯ್ಯಾರ್ ಈ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.  

isrshd-moodbidri

 

 

 

ಇರ್ಷಾದ್ ಮೂಡಬಿದಿರೆ

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!