Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಜಲಯುದ್ಧ : ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಲು ಸಜ್ಜಾಗಿದ್ಯಾ ಭಾರತ…?

ಜಲಯುದ್ಧ : ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಲು ಸಜ್ಜಾಗಿದ್ಯಾ ಭಾರತ…?

ನವದೆಹಲಿ : ಉಗ್ರರ ಮೂಲಕ ಉರಿ ವಲಯದಲ್ಲಿ 18 ಯೋಧರ ಸಾವಿಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಭಾರತ ಸೆಟೆದು ನಿಂತಿದೆ. ಈಗ ಪಾಕಿಸ್ತಾನದೊಂದಿಗೆ ಜಲಯುದ್ಧಕ್ಕೆ ಭಾರತ ಮುಂದಾಗುವ ಸಾಧ್ಯತೆ ಇದೆ. ಅಂದರೆ, ಐದು ದಶಕಗಳ ಹಿಂದೆ ಆಗಿದ್ದ `ಇಂಡಸ್ ವಾಟರ್ ಒಪ್ಪಂದ’ ಮುರಿಯಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸೋಮವಾರ (ಸೆ.26ಕ್ಕೆ) ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಈ ಮಹತ್ವದ ಸಭೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೆಲ್ಲಾ ಪಾಲ್ಗೊಳ್ಳಲಿದ್ದಾರೆ. ಈ ಸಭೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

pm1960 ಸೆಪ್ಟೆಂಬರ್ 19ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಭಾರತಕ್ಕೆ ಸಟ್ಲೇಜ್, ರಾವಿ ಮತ್ತು ಬಿಯಾಸ್ ನದಿ ನೀರು ಹಾಗೂ ಪಾಕಿಸ್ತಾನಕ್ಕೆ ಸಿಂಧೂ, ಚೇನಬ್, ಜೇಲಂ ನದಿ ನೀರು ಹಂಚಿಕೆ ಮಾಡಲಾಗಿತ್ತು. ಭಾರತ ಸಟ್ಲೇಜ್, ರಾವಿ ಮತ್ತು ಬಿಯಾಸ್ ನದಿಗಳಿಗೆ ಅಣೆಕಟ್ಟೆ ನಿರ್ಮಿಸಿ ನೀರು ಸಂಗ್ರಹಿಸಿದೆ. ಇನ್ನು, ಸಿಂಧೂ, ಚೇನಬ್ ಮತ್ತು ಜೇಲಂ ನದಿ ನೀರು ಜಮ್ಮು ಮತ್ತು ಕಾಶ್ಮೀರದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿದೆ. ಆದರೆ, ಭಾರತ ತನ್ನ ಪಾಲಿನ ಎಲ್ಲಾ ನೀರನ್ನು ಬಳಸುತ್ತಿಲ್ಲ. ಒಂದಷ್ಟು ಪ್ರಮಾಣದ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಈ ನೀರನ್ನು ನಿಲ್ಲಿಸುವಂತೆ ಆಗ್ರಹ ಕೇಳಿ ಬಂದಿದೆ. ಯಾಕೆಂದರೆ, ಭಾರತದಲ್ಲೇ ಹುಟ್ಟುವ ಈ ನದಿಗಳ ಬಹುಪಾಲು ನೀರನ್ನು ಪಾಕಿಸ್ತಾನ ಬಳಸುತ್ತಿದೆ. ಹೀಗಾಗಿ, ನೀರು ನಿಲ್ಲಿಸಿದರೆ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ.

ಇದು ಸಾಧ್ಯನಾ? : ಆದರೆ, ವಿಶ್ವಬ್ಯಾಂಕ್ ಸಮ್ಮುಖದಲ್ಲಿ ನಡೆದಿದ್ದ ಈ ಒಪ್ಪಂದವನ್ನು ಮುರಿಯಲು ಸಾಧ್ಯನಾ ಎಂಬ ಅನುಮಾನವೂ ಮೂಡಿದೆ. ವಿಶ್ವಮಟ್ಟದಲ್ಲಿ ನಡೆದ ಒಪ್ಪಂದವನ್ನು ಮುರಿಯುವುದರಿಂದ ನಾವು ವಿಶ್ವ ಮಟ್ಟದ ವಿರೋಧಕ್ಕೆ ಪಾತ್ರವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂಬ ಅನುಮಾನವೂ ಇದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!