Monday , February 19 2018
Home / News NOW / ಭಾಸ್ಕರ್ ಶೆಟ್ಟಿ ಹತ್ಯೆಗೆ ಒಂದು ತಿಂಗಳ ಹಿಂದೆಯೇ ಸ್ಕೆಚ್…?! : ಈ ಐಡಿಯಾ ಫ್ಲಾಪ್ ಆಗಿದೇಗೆ ಗೊತ್ತಾ…?
Buy Bitcoin at CEX.IO

ಭಾಸ್ಕರ್ ಶೆಟ್ಟಿ ಹತ್ಯೆಗೆ ಒಂದು ತಿಂಗಳ ಹಿಂದೆಯೇ ಸ್ಕೆಚ್…?! : ಈ ಐಡಿಯಾ ಫ್ಲಾಪ್ ಆಗಿದೇಗೆ ಗೊತ್ತಾ…?

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ, ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ಬಗೆದಷ್ಟು ಬಯಲಿಗೆ ಬರುತ್ತಲಿದೆ. ಮೊನ್ನೆಯಷ್ಟೇ ಭಾಸ್ಕರ್ ಶೆಟ್ಟಿ ಹತ್ಯೆಗೆ ಬಳಸಿದ್ದ ಎರಡು ಕಬ್ಬಿಣದ ರಾಡ್‍ಗಳು ಸಿಕ್ಕಿದ್ದವು ಎಂದು ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ವಿಷಯವೊಂದನ್ನು ಪತ್ತೆ ಹಚ್ಚುವ ಮೂಲಕ ಸಿಐಡಿ ಮಹತ್ವದ ಯಶಸ್ಸು ಸಾಧಿಸಿದೆ. ಭಾಸ್ಕರ್ ಶೆಟ್ಟಿ ಹತ್ಯೆಗೆ ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ…
niranjan bhatಆರು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ನಿರಂಜನ್ ಭಟ್ ಮಹತ್ವದ ಮಾಹಿತಿಯನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಗನ್ ಖರೀದಿಗೆ ಪ್ಯಾನ್ : ಆರೋಪಿ ನಿರಂಜನ್ ಭಟ್ ಕಾರ್ಕಳ ಮೂಲದ ಸದ್ಯ ಮುಂಬೈಯಲ್ಲಿ ಉದ್ಯೋಗದಲ್ಲಿರುವ ಸತೀಶ್ ಎಂಬಾತನಿಂದ ಒಂದು ತಿಂಗಳ ಹಿಂದೆಯೇ ಪಿಸ್ತೂಲ್ ಖರೀದಿ ಸಂಬಂಧ ಮಾತುಕತೆ ನಡೆಸಿದ್ದ. ಎಷ್ಟು ಹಣ ಕೊಟ್ಟಾದರೂ ಪಿಸ್ತೂಲ್ ಖರೀದಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸತೀಶ್ ಎಂಬಾತ ಸಕಾಲದಲ್ಲಿ ಗನ್ ಕೊಡಲಿಲ್ಲ. ಹೀಗಾಗಿ, ಈ ವ್ಯವಹಾರ ಅರ್ಧಕ್ಕೇ ನಿಂತಿತ್ತು. ಈ ಮಾಹಿತಿಯನ್ವಯ ಮುಂಬೈಯಲ್ಲಿ ಸತೀಶನನ್ನು ಜಾಲಾಡಿದ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಈ ಎಲ್ಲಾ ಸನ್ನಿವೇಶವನ್ನು ಗಮನಿಸಿದ್ದಾಗ ಭಾಸ್ಕರ್ ಶೆಟ್ಟಿ ಹತ್ಯೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಎನ್ನುವುದು ಸ್ಪಷ್ಟ.

CEX.IO Bitcoin Exchange

About sudina

Check Also

ಯುಎಇ ಎಕ್ಸ್ ಚೇಂಜ್‍ನಲ್ಲಿ ಗ್ರಾಹಕರ ಸಮಾಗಮ…

ಮಂಗಳೂರು : ಸಾರ್ವಜನಿಕ ಸೇವೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಯುಇಎ  ಎಕ್ಸ್ ಚೇಂಜ್‍ನ ಕಂಕನಾಡಿ ಬ್ರ್ಯಾಂಚ್‍ನಲ್ಲಿ ವಾರ್ಷಿಕ ಗ್ರಾಹಕರ ಸಮಾವೇಶ …

Leave a Reply

Your email address will not be published. Required fields are marked *

error: Content is protected !!