Tuesday , August 14 2018
ಕೇಳ್ರಪ್ಪೋ ಕೇಳಿ
Home / Sandalwood / ಶಿವಣ್ಣನ ಲೀಡರ್ ಟೀಂ ಸೇರಿದ ಶರ್ಮಿಳಾ ಮಾಂಡ್ರೆ

ಶಿವಣ್ಣನ ಲೀಡರ್ ಟೀಂ ಸೇರಿದ ಶರ್ಮಿಳಾ ಮಾಂಡ್ರೆ

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ `ಲೀಸರ್’ ಚಿತ್ರದಲ್ಲಿ ನಾಯಕಿಯ ಬದಲಾವಣೆ ಆಗಿದೆ. ಈ ಹಿಂದೆ ದೀಪಿಕಾ ಕಾಮಯ್ಯ ಈ ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ, ದೀಪಿಕಾ ಹೆಚ್ಚು ದಿನ ಈ ಪ್ರಾಜೆಕ್ಟ್‍ನಲ್ಲಿ ಉಳಿದಿಲ್ಲ. ದೀಪಿಕಾ ಶೀಘ್ರ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದ ಲೀಡರ್ ಪ್ರಾಜೆಕ್ಟ್‍ನಿಂದ ಹೊರಬಂದಿದ್ದಾರೆ. ಹೀಗಾಗಿ, ಚಿಂಗಾರಿ ಬೆಡಗಿಯ ಜಾಗಕ್ಕೆ ಶರ್ಮಿಳಾ ಮಾಂಡ್ರೆ ಬಂದಿದ್ದಾರೆ.

ಶರ್ಮಿಳಾ ಈಗಷ್ಟೇ ಕೆ.ಎಂ.ಚೈತನ್ಯರ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇನ್ನು, ಲೀಡರ್ ಚಿತ್ರದಲ್ಲಿ ಶಿವರಾಜ್‍ಕುಮಾರ್, ಗುರು ಜಗ್ಗೇಶ್ ಕೂಡಾ ನಟಿಸುತ್ತಿದ್ದಾರೆ. ಅಲ್ಲದೆ, ಯೋಗಿ, ಪ್ರಣೀತಾ, ವಂಶಿಕೃಷ್ಣಾ ಕೂಡಾ ಕಾಣಿಸಿಕೊಳ್ಳಲಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!