Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದ ನೋವಿದೆ, ರಾಜ್ಯದ ಜನರ ಕ್ಷಮೆ ಕೇಳುತ್ತೇನೆ : ಅಂಬರೀಷ್

ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದ ನೋವಿದೆ, ರಾಜ್ಯದ ಜನರ ಕ್ಷಮೆ ಕೇಳುತ್ತೇನೆ : ಅಂಬರೀಷ್

ಬೆಂಗಳೂರು : ತಮ್ಮ ತವರು ಕ್ಷೇತ್ರದಲ್ಲಿ ಕಾವೇರಿ ಹೋರಾಟದ ಕಿಚ್ಚು ಜೋರಾಗಿ ಇದ್ದರೂ ಹೋರಾಟದಲ್ಲಿ ಪಾಲ್ಗೊಳ್ಳದೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಹಿರಿಯ ನಟ, ರೆಬಲ್ ಸ್ಟಾರ್ ಅಂಬರೀಷ್ ರಾಜ್ಯದ ಕ್ಷಮೆಯಾಚಿಸಿದ್ದಾರೆ. ಜಯನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ನೋವಾಗುತ್ತಿದೆ. ಈ ಬಗ್ಗೆ ಜನರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಅಮೆರಿಕಾದ ಅಕ್ಕ ಸಮ್ಮೇಳನಕ್ಕಾಗಿ ನಾನು ಹೋಗಿದ್ದೆ. ಕನ್ನಡಿಗರ ಪ್ರೀತಿಗೋಸ್ಕರ ಅಲ್ಲಿಗೆ ಹೋಗಿದ್ದೆ. ಮೋಜು ಮಾಡುವ ಸಲುವಾಗಿ ಅಲ್ಲಿಗೆ ಹೋಗಿರಲಿಲ್ಲ ಎಂದು ಅಂಬಿ ಸ್ಪಷ್ಟಪಡಿಸಿದರು. ನಾನು ಯಾವತ್ತೂ ಅಧಿಕಾರಕ್ಕಾಗಲಿ, ಹಣಕ್ಕಾಗಲೀ ಕೆಲಸ ಮಾಡಿಲ್ಲ ಎಂದು ಕೇಳಿದ ಅವರು, ಈ ಹಿಂದೆ ಕಾವೇರಿ ಗಲಾಟೆ ಸಂದರ್ಭದಲ್ಲಿ ಕೇಂದ್ರ ಸಚಿವ ಸ್ಥಾನವನ್ನೇ ತೊರೆದಿದ್ದೆ ಎಂದು ಸ್ಮರಿಸಿದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!