Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಚಿತ್ರವನ್ನು ಬ್ಯಾನ್ ಮಾಡುತ್ತೇವೆ : ರಾಜ್ ಠಾಕ್ರೆ

ಸಲ್ಮಾನ್ ಚಿತ್ರವನ್ನು ಬ್ಯಾನ್ ಮಾಡುತ್ತೇವೆ : ರಾಜ್ ಠಾಕ್ರೆ

ಮುಂಬೈ : ಪಾಕಿಸ್ತಾನ ಕಲಾವಿದರು ಭಾರತ ತೊರೆಯಬೇಕು ಎಂಬ ವಿವಾದ ಈಗ ಬಹುಚರ್ಚೆಯಾಗುತ್ತಿದೆ. ಈ ನಡುವೆ, ಪಾಕಿಸ್ತಾನ ಕಲಾವಿದರ ಪರ ಬ್ಯಾಟಿಂಗ್ ಮಾಡಿದ್ದ ನಟ ಸಲ್ಮಾನ್ ಖಾನ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ತಿರುಗಿ ಬಿದ್ದಿದೆ. ಅಲ್ಮಾನ್ ಖಾನ್ ಚಿತ್ರವನ್ನೂ ನಾವು ಬ್ಯಾನ್ ಮಾಡುತ್ತೇವೆ ಎಂದು ಎಂಎನ್‍ಎಸ್ ಮುಖಂಡ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಯೋಧರು ನಮಗಾಗಿ ಗಡಿಯಲ್ಲಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಯೋಧರು ತಮ್ಮ ಅಸ್ತ್ರವನ್ನು ಕೆಳಗಿಟ್ಟರೆ ನಮ್ಮ ಗತಿಯೇನು? ಯಾರು ಗಡಿಯನ್ನು ಕಾಯುತ್ತಾರೆ? ಸಲ್ಮಾನ್ ಖಾನ್ ಹೋಗುತ್ತಾರಾ? ಬಾಲಿವುಡ್ ಹೋಗುತ್ತದಾ? ಪಾಕಿಸ್ತಾನ ಕಲಾವಿದರನ್ನು ಬೆಂಬಲಿಸುವವರು ಎಲ್ಲಾ ದೇಶ ಸ್ಥಿತಿಯನ್ನೂ ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹವರಿಗೆ ಇಲ್ಲಿ ತುಂಬಾ ಸಮಸ್ಯೆ ಇದ್ದರೆ ಇವರ ಚಿತ್ರಗಳನ್ನು ಕೂಡಾ ನಾವು ಬ್ಯಾನ್ ಮಾಡುತ್ತೇವೆ ಎಂಬುದು ರಾಜ್ ಠಾಕ್ರೆ ಮಾತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!