Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / `ದಬ್ಬಾ’ ಚಿತ್ರಗಳ ಹೇಳಿಕೆ : ನಟಿ ಸಂಜನಾ ವಿರುದ್ಧ ದೂರು

`ದಬ್ಬಾ’ ಚಿತ್ರಗಳ ಹೇಳಿಕೆ : ನಟಿ ಸಂಜನಾ ವಿರುದ್ಧ ದೂರು

ಬೆಂಗಳೂರು : ಖಾಸಗಿ ಚಾನೆಲ್‍ನ ಚರ್ಚೆಯ ಸಂದರ್ಭದಲ್ಲಿ ನಟಿ ಸಂಜನಾ ನೀಡಿದ್ದ `ಡಬ್ಬಾ ಸಿನೆಮಾ’ ಹೇಳಿಕೆ ಈಗ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದೆ. ಸಂಜನಾ ವಿರುದ್ಧ ತಿರುಗಿ ಬಿದ್ದಿರುವ ಸ್ಯಾಂಡಲ್‍ವುಡ್ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ.

ಸ್ಟಾರ್‍ಗಳು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಮಾಪಕರು ಮಾಡಿದ್ದ ಒತ್ತಾಯದ ಬಗೆಗಿನ ಚರ್ಚೆಗೆ ಬಿಗ್‍ಬಾಸ್‍ನಲ್ಲಿ ಭಾಗವಹಿಸಿದ್ದ ನಟಿ ಸಂಜನಾ ಬಂದಿದ್ದರು. ಈ ಬಿಸಿಬಿಸಿ ಚರ್ಚೆ ವೇಳೆ ಸಂಜನಾ `ಡಬ್ಬಾ’ ಸಿನೆಮಾ ಮಾಡಿದರೆ ಯಾರೂ ನೋಡಲ್ಲ ಎಂದು ಹೇಳಿದ್ದರಂತೆ. ಈ ಹೇಳಿಕೆ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ, ನಿರ್ಮಾಪಕರು ಫಿಲಂ ಛೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಸಂಜನಾ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಸಂಜನಾ ಛೇಂಬರ್ ಮುಂದೆ ಹಾಜರಾಗಲಿದ್ದಾರೆ.
ಇದೇ ವೇಳೆ, ಫೇಸ್‍ಬುಕ್‍ನಲ್ಲಿ ಸಂಜನಾ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‍ನಲ್ಲಿ ಸುದೀರ್ಘ ವಿವರಣೆ ನೀಡಿದ್ದಾರೆ. sanjana

ಸಂಜನಾ ನೀಡಿದ್ದ ಸುದೀರ್ಘ ವಿವರಣೆಯ ವೀಡಿಯೋ ಇಲ್ಲಿದೆ ನೋಡಿ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!