ಜಾರ್ಖಂಡ್ : ಜನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ, ಜಾರ್ಖಂಡ್ನಲ್ಲಿ ಆನೆಯ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಏಳು ವರ್ಷದ ಹಿಂದೆ ರಕ್ಷಿಸಲ್ಪಟ್ಟ `ರಜನಿ’ ಎಂಬ ಆನೆಯ ಹುಟ್ಟುಹಬ್ಬವನ್ನು ಆಚರಿಸಿದರು. ಈ ಖುಷಿಗೆ ಶಾಲಾ ಮಕ್ಕಳು ಕೂಡಾ ಸಾಕ್ಷಿಯಾದರು.
