Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ತೆರಿಗೆ ಪಾವತಿಯಲ್ಲಿ ಆಕ್ಷಯ್, ಹೃತಿಕ್‍ರನ್ನು ಹಿಂದಿಕ್ಕಿದ ಸಲ್ಮಾನ್ ಖಾನ್

ತೆರಿಗೆ ಪಾವತಿಯಲ್ಲಿ ಆಕ್ಷಯ್, ಹೃತಿಕ್‍ರನ್ನು ಹಿಂದಿಕ್ಕಿದ ಸಲ್ಮಾನ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅತ್ಯಧಿಕ ತೆರಿಗೆ ಪಾವತಿ ಮಾಡಿದ ನಟನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಷನ್‍ರನ್ನು ಸಲ್ಲೂ ಹಿಂದಿಕ್ಕಿದ್ದಾರೆ. ಸಲ್ಮಾನ್ ಈ ವರ್ಷ 16 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.

ಕಳೆದ ಬಾರಿ 18 ಕೋಟಿ ತೆರಿಗೆ ಪಾವತಿ ಮೂಲಕ ಮೊದಲ ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್ ಈ ಬಾರಿ 11 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡುವ ಮೂಲಕ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಕಳೆದ ವರ್ಷ ಅತೀ ಹೆಚ್ಚು ಟ್ಯಾಕ್ಸ್ ಕಟ್ಟಿದ್ದ ಟಾಪ್ 10 ನಟರ ಪಟ್ಟಿಯಲ್ಲಿದ್ದ ಹೃತಿಕ್ ಈ ಬಾರಿ ಅಕ್ಕಿ ಅವರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು, ಅಮಿತಾಭ್ ಬಚ್ಚನ್, ಐಶ್ವರ್ಯ ಬಚ್ಚನ್ ಮತ್ತು ಶಾರೂಖ್ ಖಾನ್ ಈ ಬಾರಿ ಎಷ್ಟು ಟ್ಯಾಕ್ಸ್ ಕಟ್ಟಲಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!