Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕ್ಷಮೆ ಅಲ್ಲ, ಶಿಕ್ಷೆಯನ್ನು ಕೇಳುತ್ತಿದ್ದೇನೆ : ಓಂ ಪುರಿ

ಕ್ಷಮೆ ಅಲ್ಲ, ಶಿಕ್ಷೆಯನ್ನು ಕೇಳುತ್ತಿದ್ದೇನೆ : ಓಂ ಪುರಿ

ಮುಂಬೈ : ಬಾಲಿವುಡ್ ಹಿರಿಯ ನಟ ಓಂ ಪುರಿ ಈಗ ನೊಂದಿದ್ದಾರೆ. ಉರಿ ದಾಳಿ ಬಳಿಕ ಭಾರತೀಯ ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದ್ದ ಓಂ ಪುರಿ ಅವರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ, ನಾನು ಕ್ಷಮೆ ಕೇಳುತ್ತಿಲ್ಲ. ಶಿಕ್ಷೆಯನ್ನು ಕೇಳುತ್ತಿದ್ದೇನೆ ಎಂದು ಓಂ ಪುರಿ ಹೇಳಿದ್ದಾರೆ.

ಉರಿ ದಾಳಿ ಬಳಿಕ ಮಾತನಾಡಿದ್ದ ಓಂ ಪುರಿ, ಯುವಕರಿಗೆ ಯಾರು ಸೈನಿಕರಿಗೆ ಸೇರುವಂತೆ ಹೇಳಿದ್ದು ಎಂದು ಹೇಳಿದ್ದರು. ಪುರಿ ಈ ಮಾತು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ತನ್ನ ತಪ್ಪನ್ನು ಅರಿತುಕೊಂಡಿರುವ ಓಂ ಪುರಿ, ಜನರ ಕೋಪ ನ್ಯಾಯಸಮ್ಮತವಾಗಿಯೇ ಇದೆ. ಹೀಗಾಗಿ, ನಾನು ಕ್ಷಮೆ ಕೇಳುತ್ತಿಲ್ಲ, ಶಿಕ್ಷೆಯನ್ನು ಕೇಳುತ್ತಿದ್ದೇನೆ ಎಂದು ಓಂ ಪುರಿ ಹೇಳಿದ್ದಾರೆ. ಅಲ್ಲದೆ, ಹುತಾತ್ಮ ಯೋಧರ ಕುಟುಂಬಗಳನ್ನು ಭೇಟಿಯಾಗಿ ಕ್ಷಮೆ ಕೇಳುವುದಾಗಿಯೂ ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!