Monday , January 21 2019
ಕೇಳ್ರಪ್ಪೋ ಕೇಳಿ
Home / News NOW / 68 ದಿನಗಳ ಉಪವಾಸ ವ್ರತ : 13 ವರ್ಷದ ಬಾಲಕಿ ಸಾವು

68 ದಿನಗಳ ಉಪವಾಸ ವ್ರತ : 13 ವರ್ಷದ ಬಾಲಕಿ ಸಾವು

ಹೈದರಾಬಾದ್: 68 ದಿನಗಳ ಕಠಿಣ ಉಪವಾಸ ವ್ರತ ಮಾಡಿರುವ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಆರಾಧನಾ ಮೃತ ಬಾಲಕಿ.

ಜೈನ ಧರ್ಮದ ಪವಿತ್ರ ಚೌಮಾಸ ಆಚರಣೆ ಹಿನ್ನೆಲೆಯಲ್ಲಿ ಆರಾಧನಾ 68 ದಿನಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡಿದ್ದಳು. ಈ ಕಠಿಣ ಉಪವಾಸ ಪೂರೈಸಿ ಎರಡು ದಿನಗಳ ಬಳಿಕ ಆರಾಧನಾಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ, ಹೃದಯಾಘಾತದಿಂದ ಆರಾಧನಾ ಕೊನೆಯುಸಿರೆಳೆದಿರುವುದಾಗಿ ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.

ಆರಾಧನಾರನ್ನು ಜನ ಬಾಲ ತಪಸ್ವಿ ಎಂದೇ ಕರೆಯುತ್ತಿದ್ದರು. ಅಲ್ಲದೆ, ಈಕೆಯ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಇನ್ನೊಂದ್ಕಡೆ, ಇಷ್ಟು ಸಣ್ಣ ಹುಡುಗಿಯನ್ನು ಉಪವಾಸ ಕುಳಿತುಕೊಳ್ಳಲು ಬಿಟ್ಟದ್ದು ಯಾಕೆ ಎಂಬ ಪ್ರಶ್ನೆಯನ್ನೂ ಪ್ರಜ್ಞಾವಂತರು ಕೇಳುತ್ತಿದ್ದಾರೆ. ಆದರೆ, ಕುಟುಂಬ ಮೂಲಗಳು ಹೇಳುವ ಪ್ರಕಾರ ಆರಾಧನಾ ಈ ಹಿಂದೆಯೂ 41 ದಿನ ಇಂತಹದ್ದೇ ಕಠಿಣ ವ್ರತವನ್ನು ಪೂರೈಸಿದ್ದಳು ಎಂದು ಗೊತ್ತಾಗಿದೆ.

ಆರಾಧನಾ 10 ವಾರಗಳ ಉಪವಾಸ ಪೂರೈಸಿದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಲಾಗಿತ್ತು. ತೆಲಂಗಾಣ ಮಂತ್ರಿ ಪದ್ಮ ರಾವ್ `ಪಾರಣ’ ಸಮಾರಂಭದ ಮುಖ್ಯ ಅತಿಥಿಯಾಗಿಯೂ ಪಾಲ್ಗೊಂಡಿದ್ದರು. ಜಾಹೀರಾಬಾದ್ ಶಾಸಕ ಬಿಬಿ ಪಾಟೀಲ್ ಕೂಡಾ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!