Saturday , September 22 2018
ಕೇಳ್ರಪ್ಪೋ ಕೇಳಿ
Home / Gulf News / ಕಾರು ಚಲಾಯಿಸಿದ್ದಕ್ಕೆ ಮಹಿಳೆಗೆ 180 ಏಟು, 8 ತಿಂಗಳು ಜೈಲು…!

ಕಾರು ಚಲಾಯಿಸಿದ್ದಕ್ಕೆ ಮಹಿಳೆಗೆ 180 ಏಟು, 8 ತಿಂಗಳು ಜೈಲು…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ರಿಯಾದ್ : ಇದು ಸೌದಿ ನ್ಯಾಯಾಲಯ ನೀಡಿದ ತೀರ್ಪು. ಮಹಿಳೆಯೊಬ್ಬರು ಕಾರು ಚಲಾಯಿಸಿದರು ಎಂಬುದೇ ಇಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಅದೂ ಅಲ್ಲದೆ, ಬಂಧನಕ್ಕೆ ಬಂದಿದ್ದ ಭದ್ರತಾ ಅಧಿಕಾರಿಗಳಿಗೆ ಹಲ್ಲೆ ಮಾಡಿದ ಆರೋಪ ಕೂಡಾ ಈ ಮಹಿಳೆ ಮೇಲೆ ಇತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹಿಳೆಗೆ 180 ಏಟು ಮತ್ತು 8 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. saudhiಈ ಬಗ್ಗೆ ಸ್ಥಳೀಯ ಪ್ರಖ್ಯಾತ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಈ ಪತ್ರಿಕೆ ಮಹಿಳೆಯ ಹೆಸರು ಪ್ರಕಟಿಸಿಲ್ಲ. ಜೊತೆಗೆ, ಸೌದಿ ಆಡಳಿತ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!