Friday , April 20 2018
Home / Sandalwood / ಇದು ಮದುವೆ ಫೋಟೋ ಅಲ್ಲ, ಚಿತ್ರೀಕರಣದ್ದು : ಶುಭಾ, ನಾಗೇಂದ್ರ ಪ್ರಸಾದ್ ಸ್ಪಷ್ಟನೆ

ಇದು ಮದುವೆ ಫೋಟೋ ಅಲ್ಲ, ಚಿತ್ರೀಕರಣದ್ದು : ಶುಭಾ, ನಾಗೇಂದ್ರ ಪ್ರಸಾದ್ ಸ್ಪಷ್ಟನೆ

ಬೆಂಗಳೂರು : ನಟಿ ಶುಭಾ ಪೂಂಜಾ ಮತ್ತು ಗೀತರಚನೆಕಾರ ನಾಗೇಂದ್ರ ಪ್ರಸಾದ್ ಮದುವೆಯಾಗಿದ್ದಾರೆ ಎಂದು ಸುದ್ದಿಯೊಂದು ಇತ್ತೀಚೆಗೆ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿತ್ತು. ಈಗ ಇದಕ್ಕೆ ಸ್ವತಃ ನಾಗೇಂದ್ರ ಪ್ರಸಾದ್ ಮತ್ತು ನಟಿ ಶುಭಾ ಪೂಂಜಾ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಮದುವೆ ಫೋಟೋ ಅಲ್ಲ. ಚಿತ್ರೀಕರಣಕ್ಕೆಂದು ತೆಗೆದ ಫೋಟೋ ಎಂದು ಸ್ಪಷ್ಟಪಡಿಸಿದ್ದಾರೆ.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಜನ ಇದ್ದರು. ಈ ವೇಳೆ, ಯಾರಾದರೂ ಫೋಟೋ ತೆಗೆದಿರಬಹುದು ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಶುಭಾ ಪೂಂಜಾ ಕೂಡಾ ಇದೇ ಮಾತನ್ನು ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!