Sunday , June 24 2018
ಕೇಳ್ರಪ್ಪೋ ಕೇಳಿ
Home / News NOW / ಟೌಮ್ಸ್ ನೌ ನಿಂದ ಅರ್ನಬ್ ಗೋಸ್ವಾಮಿ ದೂರ

ಟೌಮ್ಸ್ ನೌ ನಿಂದ ಅರ್ನಬ್ ಗೋಸ್ವಾಮಿ ದೂರ

ಮುಂಬೈ : ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಟೌಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಟೌಮ್ಸ್ ನೆಟ್ ವರ್ಕನ್ನು ತೊರೆಯಲಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಮುಂದುವರಿಯಲಿರುವ ಅರ್ನಬ್ ಅವರ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ಮೂಲಗಳ ಪ್ರಕಾರ ಅರ್ನಬ್ ಅವರೇ ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಲಿದ್ದಾರಂತೆ. ಇದು ಟಿವಿಯಾ ಅಥವಾ ಡಿಜಿಟಲಾ ಎಂಬುದು ಇನ್ನೂ ಗೊತ್ತಾಗಿಲ್ಲ.

ದಿ ಟೆಲಿಗ್ರಾಫ್ ಸಂಸ್ಥೆಯಲ್ಲಿ ಗೋಸ್ವಾಮಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಎನ್‍ಡಿ ಟಿವಿಯಲ್ಲಿ ರಿಪೋರ್ಟರ್, ಆಂಕರ್ ಆಗಿ ಸೇವೆ ಸಲ್ಲಿಸಿದ್ದರು. ಇಲ್ಲೇ ಹಂತ ಹಂತವಾಗಿ ಮೇಲೆ ಬಂದ ಅರ್ನಬ್ ಇಲ್ಲೇ ನ್ಯೂಸ್ ಎಡಿಟರ್ ಆದರು. ಬಳಿಕ ಸೀನಿಯರ್ ಎಡಿಟರ್ ಕೂಡಾ ಆದರು. 2006ರಲ್ಲಿ ಇವರು ಟೈಮ್ಸ್ ನೌ ಸಂಸ್ಥೆಗೆ ಸೇರಿದರು. ಅರ್ನಬ್ ನಡೆಸಿಕೊಡುವ ನ್ಯೂಸ್ ಅವರ್ ಕಾರ್ಯಕ್ರಮ ಸಖತ್ ಫೇಮಸ್ ಆಗಿದೆ. ಅರ್ನಬ್ ಟೈಮ್ಸ್ ನೌ ಅನ್ನು ನಂಬರ್ 1 ಸ್ಥಾನಕ್ಕೇರಿಸಿದರು. ಈಗಲೂ ಟೈಮ್ಸ್ ನೌ ನಂಬರ್ 1 ಸ್ಥಾನದಲ್ಲೇ ಇದೆ.

About sudina

Check Also

ಚಿಕ್ಕಮಗಳೂರು : ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ಚಿಕ್ಕಮಗಳೂರು : ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳಿಗೆ ಬಲಿಯಾಗಿದ್ದಾರೆ. ಅನ್ವರ್ ಕೊಲೆಯಾದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ. …

Leave a Reply

Your email address will not be published. Required fields are marked *

error: Content is protected !!