Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ಕಮಲ್ ಹಾಸನ್ ಬಾಳಿನಿಂದ ದೂರವಾದ ಗೌತಮಿ

ಕಮಲ್ ಹಾಸನ್ ಬಾಳಿನಿಂದ ದೂರವಾದ ಗೌತಮಿ

ಸೂಪರ್‍ಸ್ಟಾರ್ ಕಮಲ್ ಹಾಸನ್ ಬದುಕಿನಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಇಷ್ಟು ದಿನ ಕಮಲ್ ಜೊತೆ ಬದುಕುತ್ತಿದ್ದ ನಟಿ ಗೌತಮಿ ಈಗ ಕಮಲ್ ಸಂಬಂಧವನ್ನು ತೊರೆದಿದ್ದಾರೆ. 13 ವರ್ಷಗಳ ಸಂಬಂಧ ಈಗ ಮುರಿದು ಬಿದ್ದಿದೆ. ಈ ಹಿಂದೆಯೂ ಥೇಟ್ ಇಂತಹದ್ದೇ ಎರಡ್ನ್ಮೂರು ಪರಿಸ್ಥಿತಿ ಎದುರಿಸಿದ್ದ ಕಮಲ್ ಮತ್ತೆ ಒಂಟಿಯಾಗಿದ್ದಾರೆ.

13 ವರ್ಷದಿಂದ ಕಮಲ್ ಕಷ್ಟ ಸುಖಗಳಲ್ಲಿ ಒಂದಾಗಿದ್ದ ನಟಿ ಗೌತಮಿ ಕಮಲ್ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಈ ಮೂಲಕ ಮತ್ತೆ ಕಮಲ್ ಒಂಟಿ…! ಮಗಳ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ತಾನು ಕಮಲ್ ಸಂಬಂಧ ತೊರೆಯುತ್ತಿದ್ದಾನೆ ಎಂಬುದನ್ನೂ ಗೌತಮಿ ಸ್ಪಷ್ಟಪಡಿಸಿದ್ದಾರೆ.

kamal-haasan-cancer-awareness2005ರಿಂದ ಕಮಲ್ ಹಾಸನ್ ಜೊತೆಗೆ ಗೌತಮಿ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. ಗೌತಮಿಗೂ ಇದು ಎರಡನೇ ಸಂಬಂಧ 1998ರಲ್ಲಿ ಗೌತಮಿ ಉದ್ಯಮಿ ಸಂದೀಪ್ ಭಾಟಿಯಾ ಎಂಬುವವರನ್ನು ಮದುವೆಯಾಗಿದ್ದರು. 1999ರ ಲ್ಲಿ ಈ ದಂಪತಿಗೆ ಮಗಳೂ ಹುಟ್ಟಿದಳು. ಆದರೆ, ಈ ಸಂಬಂಧ ಹೆಚ್ಚು ವರ್ಷ ಉಳಿಯಲಿಲ್ಲ. 1999ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದಿದ್ದರು. ಈ ಅವಧಿಯಲ್ಲಿ ಗೌತಮಿ ಚಿತ್ರರಂಗದಿಂದ ದೂರವಾಗಿದ್ದರು. ಮತ್ತೆ ಗೌತಮಿ ಚಿತ್ರರಂಗಕ್ಕೆ ಬಂದದ್ದು 2000ನೇ ಇಸವಿಯಲ್ಲಿ. ತಮ್ಮ ಸ್ನೇಹಿತ ಕಮಲ್ ಹಾಸನ್ ಅವರ ದಶಾವತಾರಂ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುವ ಮೂಲಕ ಮತ್ತೆ ಗೌತಮಿ ಸಿನಿ ಜೀವನದ ಪಯಣ ಶುರುವಾಗಿತ್ತು.

ಚಿತ್ರರಂಗದಲ್ಲಿ ಕಮಲ್ ಮತ್ತು ಗೌತಮಿ ಒಳ್ಳೆಯ ಸ್ನೇಹಿತರಾಗಿದ್ದರು. 1989ರಲ್ಲಿ ಅಪೂರ್ವ ಸಹೋದಂಗಲ್ ಚಿತ್ರದಲ್ಲಿ ಇವರಿಬ್ಬರು ನಟಿಸಿದ್ದರು. ಹಾಗ್ ನೋಡಿದ್ರೆ ಕಮಲ್ ಮತ್ತು ಗೌತಮಿ ಜೊತೆಯಾಗಿ ನಟಿಸಿದ್ದು ತುಂಬಾ ಕಡಿಮೆ. ಆದರೆ, ನಟಿಸಿದ ಚಿತ್ರಗಳು ಸೂಪರ್ ಹಿಟ್. ಎರಡು ವರ್ಷದ ಹಿಂದೆ ಪಾಪನಾಶಂ ಎಂಬ ಚಿತ್ರದಲ್ಲಿ ಕಮಲ್ ಮತ್ತು ಗೌತಮಿ ಗಂಡ ಹೆಂಡತಿಯಾಗಿ ನಟಿಸಿದ್ದರು.
13 ವರ್ಷದಿಂದ ಗೌತಮಿ ಕಮಲ್ ಜೊತೆಗಿದ್ದರೂ ಇವರಿಬ್ಬರು ಮದುವೆ ಆಗಿರಲಿಲ್ಲ. ಅದಕ್ಕೆ ಕಾರಣ ಮದುವೆ ಮೇಲೆ ಇವರಿಬ್ಬರಿಗೂ ಇದ್ದ ಅಪನಂಬಿಕೆ. ಯಾಕೆಂದರೆ, ಗೌತಮಿ ಮತ್ತು ಕಮಲ್ ಇಬ್ಬರೂ ದಾಂಪತ್ಯದ ವಿಚಾರದಲ್ಲಿ ಸೋಲುಂಡವರೇ… ಈ ವಿಚಾರದಲ್ಲಿ ಇವರು ಒಂದೇ ದೋಣಿಯ ಪಯಣಿಗರಾಗಿದ್ದರು.

ಯಾಕೆಂದರೆ, ಕಮಲ್ ಬದುಕಿನಲ್ಲಿ ಒಂದಷ್ಟು ಜನ ಬಂದು ಹೋಗಿದ್ದಾರೆ. ಆರಂಭದಲ್ಲಿ ಕಮಲ್ ಹೆಸರು ನಟಿ ಶ್ರೀವಿದ್ಯಾ ಜೊತೆ ಥಳುಕು ಹಾಕಿಕೊಂಡಿತ್ತು. 1970ರಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಭಾರೀ ಸುದ್ದಿಯೇ ಆಗಿತ್ತು. 1978ರಲ್ಲಿ ಕಮಲ್ ಹಾಸನ್ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದರು. ಆದರೆ, 10 ವರ್ಷ ಬಳಿಕ ಈ ಸಂಬಂಧ ವಿಚ್ಚೇಧನದ ಮೂಲಕ ಮುರಿದು ಬಿದ್ದಿತ್ತು. kamal-haasan-amp1988ರಲ್ಲಿ ನಟಿ ಸಾರಿಕಾ ಜೊತೆ ಕಮಲ್ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. ಈ ಸಂಬಂಧದಿಂದ 1986ರಲ್ಲಿ ಈ ಜೋಡಿಗೆ ಮೊದಲ ಮಗಳು ಶೃತಿ ಹುಟ್ಟಿದಳು. ಮಗಳು ಶೃತಿ ಹುಟ್ಟಿದ ಬಳಿಕ ಇವರಿಬ್ಬರು ಮದುವೆಯಾಗಿದ್ದರು. ಮತ್ತೋರ್ವ ಮಗಳು ಅಕ್ಷರ 1991ರಲ್ಲಿ ಹುಟ್ಟಿದರು. kamal-12002ರಲ್ಲಿ ಇವರಿಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರಾದರೂ 2004ರಲ್ಲಿ ಇವರಿಗೆ ವಿಚ್ಚೇದನ ಸಿಕ್ಕಿತ್ತು. ಈ ನಡುವೆ ಕಮಲ್ ಹೆಸರು ತನಗಿಂತ 23 ವರ್ಷ ದೊಡ್ಡವರಾದ ಸಿಮ್ರಾನ್ ಜೊತೆ ಕೇಳಿ ಬಂದಿತ್ತು. ಇದು ಕೂಡಾ ಸಾರಿಕಾ ಮತ್ತು ಕಮಲ್ ಸಂಬಂಧ ಮುರಿದು ಬೀಳಲು ಕಾರಣ ಎಂದು ಹೇಳಲಾಗುತ್ತಿತ್ತು. 2003ರಲ್ಲಿ ಸಿಮ್ರಾನ್ ತನ್ನ ಬಾಲ್ಯದ ಗೆಳೆಯನ್ನು ಮದುವೆ ಆಗುವ ತನಕವೂ ಕಮಲ್ ಸಿಮ್ರಾನ್ ಅಫೇರ್‍ನ ಸುದ್ದಿ ದೊಡ್ಡದಾಗಿಯೇ ಕೇಳಿ ಬರುತ್ತಿತ್ತು. ಇದಾದ ಬಳಿಕವೇ ಕಮಲ್ ಬಾಳಲ್ಲಿ ಬಂದವರು ಗೌತಮಿ…kamal_haasan_sarika_simran_bagga_1393999542ಗೌತಮಿ ಕೂಡಾ ಸ್ತನದ ಕ್ಯಾನ್ಸರ್‍ನಿಂದ ಬಳಲುತ್ತಿದ್ದವರು. ಈ ಸಂಕಷ್ಟದ ಸಂದರ್ಭದಲ್ಲಿ ಇವರ ಜೊತೆಗಿದ್ದವರು ಕಮಲ್. ಮೊದಲ ಗಂಡನಿಂದ ವಿಚ್ಚೇದನ ಪಡೆದ ಬಳಿಕ ಇವರು ಕಮಲ್ ಜೊತೆಯೇ ಇದ್ದರು. ಕಮಲ್ ಅವರ ಮುಂದಿನ ಚಿತ್ರ ಸುಭಾಷ್ ನಾಯ್ಡುವಲ್ಲೂ ಇವರು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

kamalಗೌತಮಿ, ಕಮಲ್, ಶೃತಿ ಹಾಸನ್ ಮತ್ತು ಅಕ್ಷರ ಹಾಸನ್ ಹಾಗೂ ಗೌತಮಿ ಮೊದಲ ಮಗಳು ಸುಬ್ಬುಲಕ್ಷ್ಮಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಶೃತಿ ಮತ್ತು ಗೌತಮಿ ಸಂಬಂಧ ಚೆನ್ನಾಗಿರಲಿಲ್ಲ. ಇವರಿಬ್ಬರ ನಡುವೆ ಸದಾ ಜಗಳ ನಡೆಯುತ್ತಲೇ ಇತ್ತು. ಈ ಬಗ್ಗೆ ಸುದ್ದಿ ಇದ್ದರೂ ಗೌತಮಿ ಹಾಗೇನು ಇಲ್ಲ ಅಂತಾನೇ ಹೇಳುತ್ತಿದ್ದರು. ಆದರೆ, ಸುಭಾಷ್ ನಾಯ್ಡು ಚಿತ್ರದ ಶೂಟಿಂಗ್ ವೇಳೆ ಈ ಜಗಳ ತಾರಕ್ಕೇರಿತ್ತು. ಗೌತಮಿ ವಿನ್ಯಾಸಗೊಳಿಸಿದ್ದ ಡ್ರೆಸ್ ಹಾಕಲು ಶೃತಿ ನಿರಾಕರಿಸುವ ಮೂಲಕ ಈ ಜಗಳ ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿತ್ತು. ಅಮೇರಿಕಾದಲ್ಲಿ ನಡೆದ ಈ ಘಟನೆ ಬಳಿಕ ಗೌತಮಿ ಕುಗ್ಗಿದ್ದರು. ಶೃತಿ ಹಾಸನ್‍ರನ್ನು ನಿಭಾಯಿಸುವುದು ಹೇಗೆ ಎಂದು ಇವರು ಕೊರಗುತ್ತಿದ್ದರು.

shruti-hassan-new-movie-with-kamal-hassan1ಗೌತಮಿ ಮತ್ತು ಶೃತಿ ನಡುವಣ ಸಂಬಂಧ ಹಳಸಿದ್ದು ಗುಟ್ಟಾಗಿ ಏನು ಉಳಿದಿರುವಂತಹಲ್ಲ. ಈ ಜಗಳ ಮನೆಯಲ್ಲೂ ಮುಂದುವರಿದಿತ್ತು. ಇದೇ ಜಗಳ ಕಮಲ್ ಬದುಕಿನಲ್ಲೂ ಬಿರುಗಾಳಿ ಎಬ್ಬಿತ್ತು. ಅತ್ತ ಮಗಳನ್ನು ಬಿಡಲಾಗದೆ, ಇತ್ತ ಸಂಗಾತಿಯನ್ನೂ ತ್ಯಜಿಸಲಾಗದೆ ಕಮಲ್ ಚಡಪಡಿಸುತ್ತಿದ್ದರು. ಈ ಚಡಪಡಿಕೆ ನಡುವೆನೇ ಗೌತಮಿ ಕಮಲ್‍ರನ್ನು ತ್ಯಜಿಸಿದ್ದಾರೆ. letter-1 letter-2ಭಾರವಾದ ಹೃದಯದಿಂದಲೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಗೌತಮಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮೊದಲು ನಾನು ತಾಯಿ ಆ ಮೇಲೆ ಮತ್ತೊಬ್ಬರ ಸಂಗಾತಿ ಎಂದು ಹೇಳಿರುವ ಗೌತಮಿ ತನ್ನ ಮಗಳ ಭವಿಷ್ಯವನ್ನು ರೂಪಿಸುವ ಸಲುವಾಗಿ ತಾನು ಈ ನಿರ್ಧಾರ ಕೈಗೊಂಡಿರುವುದಾಗಿಯೂ ಗೌತಮಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ಬ್ಲಾಗ್‍ನಲ್ಲೂ ದೊಡ್ಡ ಪತ್ರವನ್ನು ಬರೆದು ತಾನೇಕೆ ಇಷ್ಟು ಕಠಿಣ ನಿರ್ಧಾರ ಕೈಗೊಂಡಿದ್ದೇನೆ ಎಂಬುದನ್ನೂ ಗೌತಮಿ ಬಿಚ್ಚಿಟ್ಟಿದ್ದಾರೆ.

Read Also :

ಕಮಲ್ ಹಾಸನ್ ಕುಟುಂಬದಲ್ಲಿ ಶೃತಿ ಹಾಸನ್, ಗೌತಮಿ ಜಗಳ…?

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!