Saturday , October 20 2018
ಕೇಳ್ರಪ್ಪೋ ಕೇಳಿ
Home / News NOW / 500, 1000 ರೂಪಾಯಿ ನೋಟ್ ಬಂದ್…!

500, 1000 ರೂಪಾಯಿ ನೋಟ್ ಬಂದ್…!

ನವದೆಹಲಿ : ಇನ್ನು ಮುಂದೆ 500, 1000 ರೂಪಾಯಿ ನೋಟುಗಳು ಬರೀ ಪೇಪರ್ ತುಂಡುಗಳು…! ಯಾಕೆಂದರೆ, ಈ ನೋಟ್‍ಗಳ ಚಲಾವಣೆಯನ್ನು ಸರ್ಕಾರ ಬಂದ್ ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ತುರ್ತು ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಕಪ್ಪು ಹಣ ಮತ್ತು ನಕಲಿ ನೋಟಿಗೆ ಬ್ರೇಕ್ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೋಟುಗಳನ್ನು ವಾಪಸ್ ನೀಡಲು 50 ದಿನಗಳ ಗಡುವು ನೀಡಲಾಗಿದೆ. ಬ್ಯಾಂಕ್, ಪೋಸ್ಟ್ ಆಫೀಸ್‍ನಲ್ಲಿ ನೋಟು ಬದಲಿಸಿಕೊಳ್ಳಬಹುದು. ಪ್ರತಿದಿನ 20 ಸಾವಿರ ರೂಪಾಯಿ ಮಾತ್ರ ಬದಲಿಸಿಕೊಳ್ಳಬಹುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಇನ್ನು, ನಾಳೆ ನಾಡಿದ್ದು ಎಟಿಎಂ ಕಾರ್ಯಾಚರಣೆ ಕೂಡಾ ಸ್ಥಗಿತವಾಗಲಿದೆ. ನವೆಂಬರ್ 9 ಮತ್ತು 10 ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತವಾಗಲಿದೆ. ನಿತ್ಯ 2 ಸಾವಿರ ರೂ. ಮಾತ್ರ ಎಟಿಎಂನಿಂದ ತೆಗೆಯಬಹುದು. ನಾಳೆ ಎಲ್ಲಾ ಬ್ಯಾಂಕ್‍ಗಳು ಬಂದ್ ಆಗಿರುತ್ತವೆ.

500, 2000 ರೂಪಾಯಿನ ಹೊಸ ನೋಟು ಶೀಘ್ರವೇ ತರುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಆರ್‍ಬಿಐನ 2000 ರೂಪಾಯಿ ನೋಟಿಗೆ ಅನುಮತಿ ಕೊಟ್ಟಿದ್ದೇವೆ ಎಂದೂ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!