Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್‍ಗೆ ಮತ್ತೆ ಸಂಕಷ್ಟ

ಸಲ್ಮಾನ್ ಖಾನ್‍ಗೆ ಮತ್ತೆ ಸಂಕಷ್ಟ

ನವದೆಹಲಿ : ಕೃಷ್ಣಮೃಗ ಬೇಟೆ ಪ್ರಕರಣ ಬಾಲಿವುಡ್ ನಟ ಸಲ್ಮಾನ್ ಖಾನ್‍ರನ್ನು ಮತ್ತೆ ಮತ್ತೆ ಕಾಡುತ್ತಿದೆ. 18 ವರ್ಷದ ಹಿಂದಿನ ಕೃತ್ಯಕ್ಕೆ ಸಲ್ಮಾನ್ ವಿರುದ್ಧ ದಾಖಲಾಗಿರುವ ಎರಡು ಕೇಸ್‍ಗಳನ್ನು ಖುಲಾಸೆ ಮಾಡಿದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಸಲ್ಮಾನ್ ವಿರುದ್ಧದ ಪ್ರಕರಣ ಖುಲಾಸೆಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್‍ನ ತೀರ್ಪು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆಯನ್ನು ಜಸ್ಟೀಸ್ ಎ.ಕೆ.ಶಿಕ್ರಿ ಮತ್ತು ಆರ್ ಬಾನುಮತಿ ನೇತೃತ್ವದ ಪೀಠ ಕೈಗೆತ್ತಿಕೊಂಡಿದೆ. 1998ರಲ್ಲಿ `ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸೆಪ್ಟೆಂಬರ್ 26 ಮತ್ತು 28 ರಂದು ಸಲ್ಮಾನ್ ಖಾನ್ ಬೇರೆ ಬೇರೆ ಕಡೆ ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಗುರಿಯಾಗಿದ್ದರು. ಈ ಆರೋಪದಿಂದ ಇದೇ ಜುಲೈನಲ್ಲಿ ಸಲ್ಮಾನ್ ಖುಲಾಸೆಯಾಗಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!