Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಫ್ಯಾಟ್ ಟು ಫಿಟ್ : ಇದು ದಂಗಾಲ್‍ಗಾಗಿ ಅಮೀರ್ ಬದಲಾದ ಪರಿ

ಫ್ಯಾಟ್ ಟು ಫಿಟ್ : ಇದು ದಂಗಾಲ್‍ಗಾಗಿ ಅಮೀರ್ ಬದಲಾದ ಪರಿ

ಮುಂಬೈ : ಅಮೀರ್ ಖಾನ್ ತನ್ನ ಕೆಲಸಕ್ಕೆ ತೋರುವ ಬದ್ಧತೆ ಇದು. ಒಂದು ಚಿತ್ರಕ್ಕಾಗಿ ಅಮೀರ್ ಸಿದ್ಧತೆ ಮಾಡಿಕೊಂಡರೆಂದರೆ ಸಂಪೂರ್ಣ ಅದರತ್ತನೇ ಗಮನ ಕೇಂದ್ರೀಕರಿಸುತ್ತಾರೆ. ಅದಕ್ಕೆ ಸಾಕ್ಷಿ ದಂಗಾಲ್. ದೇಹದಾಢ್ರ್ಯ ಪಟು ಮಹವೀರ್ ಸಿಂಗ್ ಪೋಗಟ್ ಜೀವನಕತೆ ಆಧರಿಸಿದ ಚಿತ್ರವಿದು. ಅಮೀರ್ ಇಲ್ಲಿ ಮಹವೀರ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕಾಗಿ ಅಮೀರ್ 25 ಕೆ.ಜಿ.ತೂಕ ಏರಿಸಿಕೊಂಡಿದ್ದರು. ಹಾಗೆಯೇ, ತರುಣ ಮಹವೀರ್ ಪಾತ್ರಕ್ಕಾಗಿ ಅಮೀರ್ ಮತ್ತೆ ಏರಿಕೆಯಾಗಿದ್ದ ತೂಕವನ್ನು ಅಷ್ಟೇ ಶೃದ್ಧೆಯಿಂದ ಇಳಿಸಿದ್ದರು. ಈ ಬದಲಾವಣೆಗಾಗಿ ಅಮೀರ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಇಲ್ಲಿದೆ ಆ ವೀಡಿಯೋ.

ಸಿಗರೇಟು ಆರಂಭಿಸಿದ ಅಮೀರ್ : ಇನ್ನು, ಈ ಚಿತ್ರಕ್ಕಾಗಿ ಅಮೀರ್ ಇಷ್ಟ ಇಲ್ಲದಿದ್ದರೂ ಸಿಗರೇಟು ಎಳೆಯುವುದನ್ನು ಶುರು ಮಾಡಿಕೊಂಡಿದ್ದಾರೆ. ಅಲ್ಲದೆ, ಚಿತ್ರ ಬಿಡುಗಡೆಯಾದ ಬಳಿಕ ಸಿಗರೇಟು ಸೇವನೆಯನ್ನು ಸಂಪೂರ್ಣ ತ್ಯಜಿಸುವುದಾಗಿಯೂ ಅಮೀರ್ ಮಾತು ಕೊಟ್ಟಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!