ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಕಾರಣ, ಮತ್ತೆ ಗಣೇಶ್ ಮತ್ತು ಯೋಗರಾಜ್ ಭಟ್ ಅವರು ಜೊತೆಯಾಗುತ್ತಿರುವುದು. ಮುಂಗಾರು ಮಳೆ, ಗಾಳಿಪಟದ ಬಳಿಕ ಗಣೇಶ್ ಮತ್ತು ಭಟ್ ಜೊತೆಯಾಗುತ್ತಿದ್ದಾರೆ. ಸದ್ಯದ ವರೆಗೆ ಈ ಚಿತ್ರಕ್ಕೆ ಯಾವುದೇ ಹೆಸರಿಟ್ಟಿಲ್ಲ. ಡಿಸೆಂಬರ್ ಮೊದಲವಾರದಲ್ಲಿ ಈ ಚಿತ್ರ ಟೇಕಾಫ್ ಆಗಲಿದೆ. ಇನ್ನೊಂದು ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಮೂವರು ಹೀರೋಯಿನ್ಗಳು ಕಾಣಿಸಿಕೊಳ್ಳಲಿದ್ದಾರಂತೆ.
