Monday , January 22 2018
Home / Film News / Bollywood / ಒಂದೇ ಪಾರ್ಟಿಯಲ್ಲಿ ಐಶ್ವರ್ಯ ಮಾಜಿ ಪ್ರೇಮಿಗಳಾದ ಸಲ್ಮಾನ್, ವಿವೇಕ್ : ಮುಂದೇನಾಯ್ತು…?
Buy Bitcoin at CEX.IO

ಒಂದೇ ಪಾರ್ಟಿಯಲ್ಲಿ ಐಶ್ವರ್ಯ ಮಾಜಿ ಪ್ರೇಮಿಗಳಾದ ಸಲ್ಮಾನ್, ವಿವೇಕ್ : ಮುಂದೇನಾಯ್ತು…?

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಯಾವತ್ತೂ ವಿವೇಕ್ ಒಬೇರಾಯ್‍ರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಇಷ್ಟ ಪಡಲ್ಲ. ಇದಕ್ಕೆ ಕಾರಣ ಐಶ್ವರ್ಯ. 2003ರ ಬಳಿಕ ಐಶ್ವರ್ಯ ಸಲ್ಮಾನ್ ಪ್ರೇಮ ಸಂಬಂಧವನ್ನು ಕಡಿದು ವಿವೇಕ್ ಜೊತೆ ಸುತ್ತಾಡಲು ಆರಂಭಿಸಿದ್ದರು. ಈ ಡೇಟಿಂಗ್ ಕಾರಣದಿಂದ ಸಲ್ಮಾನ್ ಕೊತ ಕೊತ ಕುದಿಯುತ್ತಿದ್ದರು. ಇದಾದ ಬಳಿಕ ವಿವೇಕ್ ಸಲ್ಮಾನ್ ಮೇಲೆ ದೊಡ್ಡ ಆರೋಪ ಮಾಡಿದರು. ಕುಡಿದು ಬಂದ ಸಲ್ಮಾನ್ ಖಾನ್ ಐಶ್ವರ್ಯ ಜೊತೆ ಡೇಟಿಂಗ್ ಮಾಡುತ್ತಿರುವುದಕ್ಕೆ ತನ್ನನ್ನು ಕೊಲ್ಲುವುದಾಗಿ 41 ಬಾರಿ ಬೆದರಿಕೆಯೊಡ್ಡಿದ್ದರು ಎಂದು ಸುದ್ದಿಗೋಷ್ಠಿಯಲ್ಲೇ ಒಬೇರಾಯ್ ಆರೋಪ ಮಾಡಿದ್ದರು.

salmanಇದಾದ ಬಳಿಕ ಪರಿಸ್ಥಿತಿ ಬದಲಾಯಿತು. ಮೂವರೂ ಹೆಸರೂ ಬೇರೆ ಬೇರೆಯವರೊಂದಿಗೆ ಸೇರಿಕೊಂಡಿತ್ತು. ಆದರೂ, ಸಲ್ಮಾನ್ ಮತ್ತು ವಿವೇಕ್ ನಡುವಣ ಮುನಿಸು ದೂರವಾಗಿಲ್ಲ. ಸಲ್ಮಾನ್ ತನ್ನ ತಪ್ಪಿಗೆ ಹಲವು ಬಾರಿ ಕ್ಷಮೆ ಕೇಳಿದರೂ ವಿವೇಕ್ ಮಾತ್ರ ಸಲ್ಲೂವನ್ನು ಕ್ಷಮಿಸುವ ಮೂಡ್‍ನಲ್ಲಿ ಇಲ್ಲ. ಮೊನ್ನೆಯೂ ಹೀಗೆಯೇ ಆಯ್ತು. ಒಂದೇ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ವಿವೇಕ್ ಕಾಣಿಸಿಕೊಂಡಿದ್ದರು.

ಡಿಎನ್‍ಎ ಮಾಧ್ಯಮದ ಪ್ರಕಾರ, ಶಾರೂಖ್ ಖಾನ್ ಅವರು ಆಯೋಜಿಸಿದ್ದ ಪಾರ್ಟಿಗೆ ಸಲ್ಲೂ ಮತ್ತು ವಿವೇಕ್ ಪಾಲ್ಗೊಂಡಿದ್ದರು. ಇಲ್ಲಿ ವಿವೇಕ್ ಸಲ್ಮಾನ್‍ರನ್ನು ಅವೈಡ್ ಮಾಡುತ್ತಲೇ ಇದ್ದರಂತೆ. ಪಾರ್ಟಿಯಲ್ಲಿ ಇನ್ನೊಂದು ಸೀನ್ ಕ್ರಿಯೇಟ್ ಆಗಬಾರದು ಎಂದು ಕಾರಣಕ್ಕೆ ವಿವೇಕ್ ದೂರವೇ ಇದ್ದರು. ಅವರು ಒಂದು ಮೂಲೆಯಲ್ಲಿ ಕುಳಿತಿದ್ದರು. ಸಲ್ಮಾನ್ ಅಲ್ಲಿಗೆ ಬಂದರೆ ಬೇರೊಂದು ದಿಕ್ಕಿಗೆ ವಿವೇಕ್ ಹೋಗುತ್ತಿದ್ದರಂತೆ. ಸಲ್ಮಾನ್ ವಿಚಾರದಲ್ಲಿ ವಿವೇಕ್ ಇಲ್ಲಿ ಅಕ್ಷರಶಃ ಅನ್ ಕಂಫಟೇಬಲ್ ಆಗಿದ್ದರು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!